ಬೆಂಗಳೂರು: ಅಲ್ ಖೈದಾ ಉಗ್ರ ಸಂಘಟನೆಯ ಬೆನ್ನು ಹತ್ತಿರೋ ಬೆಂಗಳೂರು ಸಿಸಿಬಿ ಪೊಲೀಸ್ರು ಶಂಕಿತ ಉಗ್ರ ಜುಭಾ ಜೊತೆ ನಿರಂತರ ಸಂಪರ್ಕದಲ್ಲಿದ್ದ ಮತ್ತೊಬ್ಬನನ್ನು ಕೋಲ್ಕತ್ತಾದಲ್ಲಿ ಸಿಸಿಬಿ ವಶಕ್ಕೆ ಪಡೆದಿದೆ.
ನಾಲ್ಕು ದಿನಗಳ ಕಾರ್ಯಾಚರಣೆ ಬಳಿಕ ಕೋಲ್ಕತ್ತಾದಲ್ಲಿ ಅಬು ಸಯ್ಯದ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸ್ತಿದೆ. ಇನ್ನೂ ಈ ತನಿಖೆ ರಾಜಧಾನಿಯಿಂದ ತಮಿಳುನಾಡಿನ ಸೇಲಂ, ಸೇಲಂ ನಿಂದ ಕೋಲ್ಕತಾ ವರೆಗೂ ತಲುಪಿದ್ದು, ತನಿಖೆಯಲ್ಲಿ ಈಗಾಗಲೇ ಅಖ್ತರ್ ಹುಸೇನ್ ಹಾಗೂ ಜುಭಾ ಇಬ್ಬರು ಆಲ್ ಖೈದ ನೇಮಕಾತಿ ಆಗಿದ್ದರು ಎಂದು ತಿಳಿದು ಬಂದಿದೆ.
ನೇಮಕಾತಿ ಚರ್ಚಾ ಗ್ರೂಪ್ ನ ಲೀಸ್ಟ್ ನಲ್ಲಿದ್ದ ಅಬು ಸಯ್ಯದ್ ಕನಿಷ್ಠ ವಿದ್ಯಾಭ್ಯಾಸ ಇಲ್ಲದ ಕಾರಣಕ್ಕೆ ಹ್ಯಾಂಡ್ಲರ್ಸ್ ತಡ ಮಾಡಿದ್ರು.ಆದ್ರೂ ಅಬು ಸೈಯದ್ ನ ವಿದ್ಯಾಭ್ಯಾಸ ಇಲ್ಲದಿದ್ರೂ ಟೆಕ್ನಿಕಲಿ ಸ್ಟ್ರಾಂಗ್ ಮಾಡಲು ಮುಂದಾಗಿದ್ರು. ಟೆಲಿಗ್ರಾಂ ಗ್ರೂಪ್ ಮೂಲಕ ಸಂಪರ್ಕದಲ್ಲಿದ್ದ ಶಂಕಿತರು ನೇಮಕಾತಿ ವಿಚಾರಗಳನ್ನ ಇದೇ ಗ್ರೂಪ್ ನಲ್ಲಿ ಚರ್ಚೆ ಮಾಡಿದ್ರು ಸದ್ಯ ಈ ಚಾಟ್ ಹಿಸ್ಟರಿ ಮೇಲೆ ಸಿಸಿಬಿ ತನಿಖೆ ಮುಂದುವರಿಸಿದೆ.
PublicNext
04/08/2022 12:04 pm