ಬೆಂಗಳೂರು: 'ನಿಮ್ಮ ಮನೆಯಲ್ಲಿ ಜಿರಳೆ, ತಿಗಣೆ ಕಾಟವೇ?' ಅಂತ ಬೋರ್ಡ್ ನೋಡಿ ಕ್ರಿಮಿನಾಶಕವನ್ನು ಮನೆಗೆ ತಂದು ಸಿಂಪಡಿಸುವ ಮುನ್ನ ಸ್ವಲ್ಪ ಜಾಗ್ರತೆ. ಸ್ವಲ್ಪ ಏಮಾರಿದ್ರು ಪ್ರಾಣಕ್ಕೆ ಕುತ್ತು ಬರೋದು ಪಕ್ಕಾ.
ತನ್ನದಲ್ಲದ ತಪ್ಪಿಗೆ ಆರು ವರ್ಷದ ಕಂದ ಅಸುನೀಗಿದೆ. ಅಪ್ಪ ಅಮ್ಮ ಮತ್ತು ಮನೆ ಮಾಲೀಕನ ಯಡವಟ್ಟಿಗೆ ಆರು ವರ್ಷದ ಬಾಲಕಿ ಬಲಿಯಾಗಿದ್ರೆ ಅಪ್ಪ-ಅಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಈ ಘಟನೆ ಬೆಂಗಳೂರಿನ ವಸಂತನಗರದ 5ನೇ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಮನೆಯಲ್ಲಿ ತಿಗಣೆ, ಜಿರಳೆ ಹೆಚ್ಚಾಗಿದ್ರಿಂದ ಮನೆ ಮಾಲಿಕ ಔಷಧಿ ಸಿಂಪಡಿಸೋದಾಗಿ ಹೇಳಿದ್ರು. ಇದಕ್ಕೆ ಒಂದು ವಾರ ಮನೆಗೆ ಬರಬೇಡಿ ಅಂತ ಹೇಳಿದ್ರು. ಇದಕ್ಕೆ ಒಪ್ಪಿದ ಬಾಡಿಗೆದಾರರಾದ ವಿನೋದ್ ಮತ್ತು ನಿಶಾ ಹಾಗೂ ಆರು ವರ್ಷದ ಅಹನಳಾ ಜೊತೆ ಸಂಬಂಧಿಕರ ಮನೆಗೆ ಹೋಗಿದ್ರು. ತಿಗಣೆ ಔಷಧದ ಅರಿವಿಲ್ಲದೆ ಇಂದು ಮುಂಜಾನೆ ಐದು ಗಂಟೆಗೆ ಮನೆಗೆ ಬಂದು ಮಲಗಿದ್ರು. ಅದ್ಯಾವ ಕೀಟನಾಶಕ ಸಿಂಪಡಿಸಿದ್ರೊ ಗೊತ್ತಿಲ್ಲ. ಮನೆಗೆ ಬಂದು ಮಲಗುತ್ತಿದ್ದಂತೆ ಉಸಿರಾಟದ ಸಮಸ್ಯೆಯಾಗಿತ್ತು ಇದನ್ನು ನಿರ್ಲಕ್ಷ್ಯ ಮಾಡಿದ ಮನೆಯವರು ಕಾಫಿ ಮಾಡಿ ಕುಡಿದು ರೆಸ್ಟ್ ಮಾಡಿದ್ರು. ಆದ್ರೆ ಆರು ವರ್ಷದ ಬಾಲಕಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿ ಸಾವನ್ನಪ್ಪಿದ್ದಾಳೆ. ಇನ್ನೂ ಪೋಷಕರು ಅಸ್ವಸ್ಥಗೊಂಡಿರೋ ಮನೆ ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಮನೆ ಮಾಲಿಕ ಶಿವಶಂಕರ್ ಮೇಲೆ ಹೈಗ್ರೌಂಡ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶಿವಶಂಕರ್ ಮನೆಯಲ್ಲಿ ಕಳೆದ ಕೆಲ ವರ್ಷದಿಂದ ವಿದೋದ್ ದಂಪತಿ ವಾಸವಿದ್ರು ಎಂದು ತಿಳಿದು ಬಂದಿದೆ.
PublicNext
02/08/2022 02:59 pm