ಬೆಂಗಳೂರು: ಸಂಸಾರ ಅಂದಮೇಲೆ ಮನಸ್ತಾಪಗಳು ಕಾಮನ್. ಅಡಿಗೆ ವಿಚಾರ ಬಂದ್ರೆ ಉಪ್ಪು ಖಾರ ಹೆಚ್ಚು ಕಡಿಮೆ ಆಗೋದು ಇದ್ದಿದ್ದೆ ಆದ್ರೆ ಇಲ್ಲೊಬ್ಬ ಪತಿರಾಯ ಹೆಂಡ್ತಿ ಮಾಡಿದ ಕಬಾಬ್ ರುಚಿಯಾಗಿಲ್ಲ ಅಂತಾ ಗಂಡ ನೇಣಿಗೆ ಶರಣಾಗಿದ್ದಾನೆ.
ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎಂ.ಸುರೇಶ್(48) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಸುರೇಶ್ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಶಾಲಿನಿಗೆ ಕಬಾಬ್ ಮಾಡಲು ಹೇಳಿದ್ದ. ಕಬಾಬ್ ತಿಂದು ಟೆಸ್ಟ್ ಇಲ್ಲ ಅಂತಾ ಗಲಾಟೆ ಮಾಡಿ ಪತ್ನಿ ಶಾಲಿನಿಗೆ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದ. ಸದ್ಯ ಪತ್ನಿ ಶಾಲಿನಿ ಹೊಡೆತ ತಿಂದು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಪೊಲೀಸರಿಗೆ ಪತ್ನಿ ಗಂಡನ ವಿರುದ್ಧ ಹೇಳಿಕೆ ನೀಡಿದ್ದಾಳೆ. ಈ ಹಿನ್ನೆಲೆ ಬನ್ನೇರುಘಟ್ಟ ಪೊಲೀಸರು ಸುರೇಶ್ಗೆ ಹುಡಕಾಟ ನಡೆಸಿದ್ದಾರೆ. ಆದರೆ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಸುರೇಶ್ ಮೃತದೇಹ ಪತ್ತೆಯಾಗಿದೆ. ಸದ್ಯ ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
01/08/2022 02:59 pm