ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ-ಗೌರಿಬಿದನೂರು ಗಡಿಭಾಗದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಪ್ರಕೃತಿಯ ಮಾತೆಯ ಒಡಲೊಳಗಿನ ಬೆಟ್ಟಗುಡ್ಡಗಳನ್ನ ಕರಗಿಸಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದಾರೆ. ಮರಳು ದಂಧೆಗೆ ಅಧಿಕಾರಿಗಳೇ ಶಾಮೀಲಾಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಗಡಿಭಾಗದ ಗ್ರಾಮ ಮುಖಡಿಘಟ್ಟ, ತಾಲೂಕು ಕೇಂದ್ರದಿಂದ 30 ಕಿ.ಮೀ ದೂರದಲ್ಲಿರುವ ಗ್ರಾಮ. ಪ್ರಕೃತಿಯ ಒಡಲಲ್ಲಿರುವ ಗ್ರಾಮದ ಸುತ್ತಮುತ್ತ ಬೆಟ್ಟಗುಡ್ಡಗಳು ಅರಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ಮತ್ತು ದೊಡ್ಡಬಳ್ಳಾಪುರ ಗಡಿಭಾಗ ಇದು. ಆಡಳಿತ ಕೇಂದ್ರದಿಂದ ದೂರ ಇರುವ ಕಾರಣಕ್ಕೆ ಅಕ್ರಮ ಮರಳುದಂಧೆಗೆ ಕಾರಣವಾಗಿದೆ. ಗ್ರಾಮದ ಸರ್ವೆ ನಂಬರ್ 37ರಲ್ಲಿ 219 ಎಕರೆ ಸರ್ಕಾರಿ ಗೋಮಾಳ ಇದೆ. ಗ್ರಾಮದ ಕೆಲವು ರೈತರು ಇಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಮತ್ತೆ ಕೆಲವರು ಬೆಟ್ಟದಲ್ಲಿರುವ ಮರಳು ಕೊರೆದು ಅಕ್ರಮ ಮರಳು ದಂಧೆ ನಡೆಸುತ್ತಿದ್ದಾರೆ.
ರಾತ್ರಿಯಾಗುವುದೇ ತಡ ಅಕ್ರಮ ಮರಳು ದಂಧೆ ಪ್ರಾರಂಭವಾಗುತ್ತೆ, ಪ್ರತಿದಿನ 20ಕ್ಕೂ ಹೆಚ್ಚು ಟ್ರಾಕ್ಟರ್‌ಗಳಿಂದ ಮರಳು ಸಾಗಟ ಮಾಡಲಾಗುತ್ತಿದೆ. ಇಲ್ಲಿನ ಮರಳು ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಸಾಗಟ ಮಾಡುತ್ತಾರೆ. ಪೊಲೀಸ್ ಇಲಾಖೆಗೆ ಮಾಮೂಲಿ ಹೋಗುವುದರಿಂದ ಅಕ್ರಮ ಮರಳು ದಂಧೆಗೆ ಶಾಮೀಲಾಗಿದ್ದಾರೆಂದು ಗ್ರಾಮಸ್ಥರು ನೇರ ಆರೋಪ ಮಾಡುತ್ತಿದ್ದಾರೆ. ಇನ್ನೂ ಕಂದಾಯ ಇಲಾಖೆ ದೂರದ ನೆಪ ಹೇಳಿಕೊಂಡು ತಾಲೂಕು ಕೇಂದ್ರದಲ್ಲೇ ಬಿಡಾರ ಹೂಡಿದ್ದಾರೆ.
ಮುಂದಿನ ಪೀಳಿಗೆಗೆ ಅಮೂಲ್ಯ ಅರಣ್ಯ ಸಂಪತ್ತು ಕಾಪಾಡಬೇಕಾದ ನಾವು ಹಣದಾಸೆಗೆ ಬೆಟ್ಟಗುಡ್ಡ ಕೊರೆತು ಪ್ರಕೃತಿಗೆ ಕನ್ನ ಹಾಕುತ್ತಿವೆ. ಪ್ರಕೃತಿ ಸಂಪತ್ತು ಕಾಪಾಡಬೇಕಾದ ಅಧಿಕಾರಿಗಳು ಮಾಮೂಲಿ ಪಡೆದು ಅಕ್ರಮಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗಿದೆ.
PublicNext
01/08/2022 01:07 pm