ಬೆಂಗಳೂರು: ಒಂದು ಕಡೆ ನಗರದಲ್ಲಿ ಕ್ರೈಂ ಮೀತಿ ಮೀರಿ ಹೋಗ್ತಿದೆ ಇನ್ನೊಂದು ಕಡೆ ಮನೆಗಳಲ್ಲಿ ಸರ್ವೆಂಟ್ ಥೆಫ್ಟ್ ಮೋಡಸ್ ಕೂಡ ಹೆಚ್ಚಾಗ್ತಿದೆ. ಅದ್ರಲ್ಲೂ ಮನೆ ಕೆಲಸಕ್ಕೆ ಸೇರೋ ಹೊರ ರಾಜ್ಯದವರು ಮನೆ ಗುಡಿಸಿ ಗುಂಡಾಂತರ ಮಾಡೋದು ಕಾಮನ್ ಆಗಿದೆ. ಅಂತಹದೆ ಒಂದು ಕಳ್ಳತನ ಮಾಜಿ ಗೃಹ ಸಚಿವ ಹಾಲಿ ಶಾಸಕರ ಮನೆಯಲ್ಲಿ ನಡೆದಿದೆ. ಅದು ಕೂಡು ಹೈಫೈ ಏರಿಯಾ ಸದಾಶಿವನಗರದಲ್ಲಿ.
ಹೌದು ಮಾಜಿ ಗೃಹ ಸಚಿವ ಎಂಬಿ ಪಾಟೀಲ್ ಮನೆಯಲ್ಲಿ ಕಳೆದ ತಿಂಗಳು 85 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಮತ್ತು ಲಕ್ಷ ಲಕ್ಷ ಬೆಲೆಯ 6 ಬ್ರಾಂಡೆಡ್ ವಾಚ್ ಗಳು ಕಳ್ಳತನ ಆಗಿದೆ. ಎಂಬಿ ಪಾಟೀಲ್ ಮನೆಯಲ್ಲಿ ಲಾಂಡ್ರಿ ಕೆಲಸ ಮಾಡ್ತಿದ್ದ ಜಯಂತ್ ದಾಸ್ ಎಂಬುವನು ಕದ್ದು ಒಡಿಸ್ಸಾಗೆ ಪರಾರಿಯಾಗಿದ್ದ.
ಮಾಹಿತಿ ತಿಳಿದು ಮಾಜಿ ಗೃಹಮಂತ್ರಿಗಳು ತಮ್ಮ ಅಡಿಗೆಯವರ ಮುಖೇನ ಸದಾಶಿವನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ರು. ದೂರಿನನ್ವಯ ಸದಾಶಿವನಗರ ಪೊಲೀಸ್ರು ಆರೋಪಿ ಜಯಂತ್ ಬಂಧಿಸಿ ಕರೆ ತಂದಿದ್ದಾರೆ. ಸದ್ಯ ಐದು ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಇನ್ನೂ ಜಯಂತ್ ದಾಸ್ ಕಳೆದ ಐದು ವರ್ಷದಿಂದ ಎಂಬಿ ಪಾಟೀಲ್ ಮನೆಯಲ್ಲಿ ಕೆಲಸ ಮಾಡ್ತಿದ್ದ ಎಂದು ತಿಳಿದು ಬಂದಿದೆ.
ಇನ್ನೂ ಮಾಜಿ ಸಚಿವ ಎಂಬಿ ಪಾಟೀಲ್ ಸಾಹೇಬ್ರು ಮಾತ್ರ ತಮ್ಮ ಹೆಸರಲ್ಲಿ ದೂರು ದಾಖಲಿಸದೆ ಕೆಲಸದಾಳುಗಳ ಕೈಲಿ ಯಾಕೆ ದೂರು ಕೊಟ್ರೋ ಗೊತ್ತಿಲ್ಲ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
31/07/2022 09:48 pm