ಬೆಂಗಳೂರು: ನೀವೇನಾದ್ರೂ ಗಂಡನಿಂದ ದೂರಾಗ್ಬೇಕು ಅಂದುಕೊಂಡಿದ್ರೆ ಅಥವಾ ದೂರ ಆಗಿದ್ರೆ ಸ್ವಲ್ಪ ಹುಷಾರ್. ಯಾಕಂದ್ರೆ ನಿಮ್ಮ ವೀಕ್‌ನೆಸ್‌ಅನ್ನೇ ಬಂಡವಾಳ ಮಾಡಿಕೊಂಡು ನಿಮ್ಮನ್ನು ಬೀದಿಗೆ ತಂದು ಬಿಡುತ್ತೆ ಈ ಗ್ಯಾಂಗ್.
ಒಂಟಿ ಮಹಿಳೆಯ ಟಾರ್ಗೆಟ್ ಮಾಡಿ ಅದ್ರಲ್ಲೂ ವಿಚ್ಛೇಧಿತ ಮಹಿಳೆಯರನ್ನ ಟ್ರ್ಯಾಪ್ ಮಾಡಿ ವಿಕೃತಿ ಮೆರೆದು ರಾಬರಿ ಮಾಡ್ತಿದ್ದ ಗ್ಯಾಂಗ್ ಸದ್ಯ ಖಾಕಿ ಬಲೆಗೆ ಬಿದ್ದಿದೆ. ಮಂಗಳ, ರವಿ, ಶಿವಕುಮಾರ್, ಶ್ರೀನಿವಾಸ್ ಬಂಧಿತ ಆರೋಪಿಗಳು ಇದರಲ್ಲಿ ಮಂಗಳ ಮತ್ತು ರವಿ ಗಂಡ ಹೆಂಡತಿ. ಇನ್ನೂ ಈ ಗ್ಯಾಂಗ್ ಡೈವರ್ಸ್ ಆಗಿರುವ, ಡೈವರ್ಸ್ ಗೆ ಸಿದ್ದರಿರುವ ಹಾಗು ಗಂಡ ಸತ್ತು ಒಂಟಿಯಾಗಿರುವ ಮಹಿಳೆಯ ಗುರುತು ಮಾಡ್ತಿದ್ರು. ಇದಾದ ಬಳಿಕ ಈ ಗ್ಯಾಂಗ್‌ನ ಕಿಂಗ್ ಪಿನ್ ಮಂಗಳ ಇಂಥಹ ಮಹಿಳೆಯರನ್ನ ಟಾರ್ಗೆಟ್ ಮಾಡಿ ಮೊದಲು ಅವರೊಂದಿಗೆ ಸ್ನೇಹ ಮಾಡ್ತಿದ್ಳು.
ಫೋನ್ ಮೂಲಕ ಮಾತನಾಡುತ್ತ ನಿನ್ನ ಕಷ್ಟಕ್ಕೆ ಪರಿಗಾರ ಸಿಗುತ್ತೆ ನಮ್ಮವರು ನಿನಗೆ ಹೆಲ್ಪ್ ಮಾಡ್ತಾರೆ ಅಂತ ಫೋನ್ ನಲ್ಲಿ ಪುಸಲಾಯಿಸಿ ಆಪರೇಟ್ ಮಾಡ್ತಿದ್ದ ಮಂಗಳ, ಮೀಟಿಂಗ್ ನಮ್ದೆ ಕಾರ್ ಕಳುಸ್ತಿನಿ ಅಂತ ಗಂಡ ರವಿ ಜೊತೆಗೆ ಇನ್ನಿತರ ಆರೋಪಿಗಳನ್ನ ಕಳುಹಿಸಿ ಮಹಿಳೆಯರನ್ನ ಪಿಕ್ಮಾಡಿಸ್ತಿದ್ಳು.
ಬಳಿಕ ಕಾರಿನಲ್ಲಿ ಕಿಡ್ನಾಪ್ ಮಹಿಳೆಯನ್ನ ನಿರ್ಜನ ಪ್ರದೇಶಸಕ್ಕೆ ಕರೆದುಕೊಂಡು ಹೋಗ್ತಿದ್ದ ಈ ಗ್ಯಾಂಗ್ ತಾವರೆಕೆರೆ ಕಡೆಯ ಅರಣ್ಯ ಪ್ರದೇಶದಕ್ಕೆ ಕರೆದುಕೊಂಡು ಹೋಗಿ ಮಹಿಳೆಗೆ ಬಟ್ಟೆ ಬಿಚ್ಚಲು ಬೆದರಿಕೆ ಹಾಕ್ತಿದ್ರು. ಒಪ್ಪದೆ ಇದ್ದಾಗ ಚಾಕು ತೋರಿಸಿ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸುತಿದ್ರು. ಆ ಸಮಯದಲ್ಲಿ ಅದೆಲ್ಲವನ್ನೂ ವಿಡಿಯೋ ಮಾಡಿ ಮೊಬೈಲ್ ಫೋನ್‌ನಲ್ಲಿ ಇಟ್ಟುಕೊಳ್ತಿತ್ತು ಈ ಗ್ಯಾಂಗ್. ಈ ವಿಡಿಯೋ ಹೊರಗೆ ಲೀಕ್ ಆಗಬಾರದು ಅಂದ್ರೆ ಕೇಳಿದಷ್ಟು ಹಣ ಕೊಡಬೇಕು ಅಂತ ಬಲವಂತವಾಗಿ ಪದೇ ಪದೇ ಹಣ ಪಡೆಯುತ್ತಿದ್ರು.
ಮಹಾಲಕ್ಷ್ಮಿ ಲೇಔಟ್‌ನ ಓರ್ವ ಮಹಿಳೆಯಿಂದ ಒಂದು ಚಿನ್ನದ ಚೈನ್, ಕಿವಿಯೋಲೆ, ಉಂಗುರ ಕಿತ್ತುಕೊಂಡು ಇದೇ ರೀತಿ ಹಣಕ್ಕೆ ಡಿಮ್ಯಾಂಡ್ ಮಾಡಿದಾಗ 84ಸಾವಿರ ಹಣವನ್ನ ಫೋನ್ ಮೂಲಕ ಹಾಕಿಸಿಕೊಂಡು, ನಂತರ ಮೊಬೈಲ್ ಸಿಮ್ ಕಾರ್ಡ್ ಕಿತ್ತುಕೊಂಡು ನಡು ರಸ್ತೆಯಲ್ಲಿ ಬಿಟ್ಟುಹೋಗಿತ್ತು ಈ ಗ್ಯಾಂಗ್.
ಘಟನೆ ನಂತ್ರ ಮಹಿಳೆ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಇನ್ಸ್ಪೆಕ್ಟರ್ ಕಾಂತರಾಜು ಆ್ಯಂಡ್ ಟೀಮ್ ಈ ಗ್ಯಾಂಗ್‌ನ ಹೆಡೆಮುರಿ ಕಟ್ಟಿದ್ದಾರೆ. ವಿಚಾರಣೆ ವೇಳೆ ಇದೇ ರೀತಿ ಎಂಟು ಮಹಿಳೆಯರಿಗೆ ಹಿಂಸೆ ನೀಡಿ ರಾಬರಿ ಮಾಡಿರುವುದು ಬೆಳಕಿಗೆ ಬಂದಿದೆ. ಎಂಟು ಮಹಿಳೆಯರು ಹೆದರಿ ಪೊಲೀಸ್ ಠಾಣೆಗೆ ದೂರರು ನೀಡಿಲ್ಲ ಎಂದು ಮಾಹಿತಿ ಲಭಿಸಿದೆ. ಸದ್ಯ ನೊಂದ ಮಹಿಳೆಯರಿಗೆ ಘಟನೆ ನಡೆದ ಸ್ಥಳೀಯ ಪೊಲೀಸ್ ಠಾಣೆ ಗೆ ದೂರು ನೀಡಲು ಪೊಲೀಸ್ರು ಮನವಿ ಮಾಡಿದ್ದಾರೆ.
PublicNext
31/07/2022 09:11 pm