ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಚೀಟಿ (ಅ)ವ್ಯವಹಾರ" ನೂರಾರು ಜನರಿಗೆ ಪಂಗನಾಮ; ಉಮೇಶನ 'ವೇಷ' ಅನಾವರಣ

ಬೆಂಗಳೂರು: ಸಿಲಿಕಾನ್ ಸಿಟಿ ಜನರು ಹಣ ಉಳಿತಾಯ ಮಾಡುವುದಕ್ಕಾಗಿ ಇತ್ತೀಚೆಗೆ ಚೀಟಿ ವ್ಯವಹಾರ ಮಾಡಲು ಮುಂದಾಗ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಮೋಸಗಾರರು ವಂಚಿಸಲಾರಂಭಿಸಿದ್ದಾರೆ. ಅಂದಹಾಗೆ ಇವತ್ತು ಒಬ್ಬ ವ್ಯಕ್ತಿ ಚೀಟಿ ವ್ಯವಹಾರದಲ್ಲಿ ಮೋಸ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಆರ್ ಟಿ ನಗರ ನಿವಾಸಿಗಳು ಲಕ್ಷಾಂತರ ರೂ.ಗಳ ಚೀಟಿ ವ್ಯವಹಾರ ಉಮೇಶ್ ಎಂಬಾತನೊಂದಿಗೆ ಮಾಡಿದ್ದಾರೆ. ಪ್ರತಿ ವಾರ 20 ಸಾವಿರ ಹಣವನ್ನು ಉಮೇಶ್ ನಿಗೆ ಕಟ್ಟುತ್ತಿದ್ರು. ಈತನ ಬಳಿ 100ಕ್ಕೂ ಹೆಚ್ಚು ಜನ ಚೀಟಿ ಹಾಕಿದ್ರು. 20 ಕೋಟಿಗೂ ಅಧಿಕ ಹಣ ಕಬಳಿಸಿ ಇದೀಗ ಉಮೇಶ್ ನಂಬಿದ ಜನರಿಗೆ ಉಂಡೆನಾಮ ಹಾಕಿದ್ದಾನೆ.

ಕೂಲಿನಾಲಿ ಮಾಡುವವರು, ಫುಟ್‌ ಪಾತ್ ವ್ಯಾಪಾರಿಗಳು ಸೇರಿದಂತೆ ಹಲವರು ಹಿರಿಯರು ಉಮೇಶ್ ಬಳಿ ಚೀಟಿ ಹಾಕಿದ್ರು. ಆದ್ರೆ, ಚೀಟಿ ದುಡ್ಡನ್ನೆಲ್ಲ ಎತ್ತಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಜನ ಹಣ ಕೇಳಲು ಹೋದಾಗ ಕುಂಟುನೆಪ ಹೇಳಿದ್ದಾನೆ. ಕೊನೆಗೆ ಈತನ ಬಳಿ ತಮ್ಮ ಹಣಕ್ಕೆ ಗೋಗರೆದು ಸುಸ್ತಾದ ಬಡಪಾಯಿ ಜನರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಉಮೇಶನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಕೇಸ್ ಈಗ ಕೋರ್ಟ್ ಮೆಟ್ಟಿಲೇರಿದೆ. ಜನರು ಸಿಕ್ಕ ಸಿಕ್ಕವರ ಹತ್ತಿರ ಚೀಟಿ ವ್ಯವಹಾರ ಮಾಡದೆ, ಇನ್ನಾದರೂ ಎಚ್ಚರದಿಂದ ಇರಬೇಕಾಗಿದೆ.

- ಗೀತಾಂಜಲಿ, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Nagesh Gaonkar
PublicNext

PublicNext

27/07/2022 10:48 pm

Cinque Terre

43.93 K

Cinque Terre

3

ಸಂಬಂಧಿತ ಸುದ್ದಿ