ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೋಜಿಗಾಗಿ ಬೈಕ್ ಕದಿಯುತ್ತಿದ್ದ ಖದೀಮ ಬಂಧನ: ಬುಲೆಟ್ಟು ಇವನ ಟಾರ್ಗೆಟ್ಟು

ಬೆಂಗಳೂರು: ಮೋಜು ಮಸ್ತಿಗಾಗಿ ಬೈಕ್ ಕದಿಯುತ್ತಿದ್ದ ಬೈಕ್ ಕಳ್ಳ ಕಿಶನ್ ಚೌದರಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಕಿಶನ್ ಬಂಧನದಿಂದ ಈಶಾನ್ಯ ವಿಭಾಗ ಮತ್ತು ಬೆಂಗಳೂರು ನಗರ ವ್ಯಾಪ್ತಿಯ 13ಪ್ರಕರಣಗಳಲ್ಲಿ 14ಬೈಕ್‌ಗಳು ಪತ್ತೆಯಾಗಿವೆ.

ರಾಯಲ್ ಎನ್ಫೀಲ್ಡ್ ಬೈಕ್‌ಗಳನ್ನೆ ಈತ ಹೆಚ್ಚು ಟಾರ್ಗೆಟ್ ಮಾಡುತ್ತಿದ್ದ. ಸದ್ಯ ಪತ್ತೆಯಾಗಿರುವ 11ಲಕ್ಷ ಬೆಲೆಯ ಬೈಕ್‌ಗಳನ್ನ ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ವಿದ್ಯಾರಣ್ಯಪುರ ಪೊಲೀಸರು ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

27/07/2022 09:47 am

Cinque Terre

8.52 K

Cinque Terre

0

ಸಂಬಂಧಿತ ಸುದ್ದಿ