ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಪರಿಚಿತ ಕುಟುಂಬದ ಮೇಲೆ ಕುಡುಕನ ದಾಳಿ, ಮಚ್ಚಿನೇಟು!

ನೆಲಮಂಗಲ: ಕುಡಿದ ಮತ್ತಿನಲ್ಲಿದ್ದ ಯುವಕನೋರ್ವ, ಕುಟುಂಬ ಸಹಿತ ತೆರಳಿದ್ದವರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ದಾಂಧಲೆ ನಡೆಸಿದ್ದು, ಅದನ್ನು ಪ್ರಶ್ನಿಸಲು ಮುಂದಾಗಿದ್ದ ವೇಳೆ ತಲೆಗೆ ಮಚ್ಚು ಬೀಸಿರೋ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಹುಳ್ಳೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೋಲಾರ ಮೂಲದ ಗಿರೀಶ್ ಮತ್ತವರ ಕುಟುಂಬಸ್ಥರು ಒಟ್ಟುಗೂಡಿ ಹುಳ್ಳೇಗೌಡನಹಳ್ಳಿಯಲ್ಲಿರೋ ತನ್ನ ತಂಗಿ ಮಗುವಿನ ಹುಟ್ಟುಹಬ್ಬಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಮದ್ಯದ ನಶೆಯಲ್ಲಿದ್ದ ಯುವಕನೋರ್ವ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಅದನ್ನು ಪ್ರಶ್ನಿಸಲು ಮುಂದಾದ ಗಿರೀಶ್ ತಲೆಗೆ ಮಚ್ಚು ಬೀಸಿದ್ದಾನೆ.

ಬಳಿಕ ತಲೆಗೆ ಗಂಭೀರ ಗಾಯಗೊಂಡ ಗಿರೀಶ್ ಸದ್ಯ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಈ ಸಂಬಂಧ ಗಿರೀಶ್ ಕುಟುಂಬಸ್ಥರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.

Edited By : Manjunath H D
PublicNext

PublicNext

26/07/2022 10:08 pm

Cinque Terre

48.5 K

Cinque Terre

2

ಸಂಬಂಧಿತ ಸುದ್ದಿ