ನೆಲಮಂಗಲ: ರಸ್ತೆಯಲ್ಲಿ ಕೆಟ್ಟುನಿಂತ ಕ್ಯಾಂಟರ್ ವಾಹನಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲ ನಗರದ ವೀವರ್ಸ್ ಕಾಲೋನಿಯ ಗೋಪಿ ವೆಂಕಟೇಶ್ವರ ರಸ್ತೆಯಲ್ಲಿ ನೆಡೆದಿದೆ.
ಇನ್ನೂ ರಾಯಚೂರು ಮೂಲದ ಸಿದ್ಧಯ್ಯ 42 ವರ್ಷ ಮೃತ ದುರ್ದೈವಿ, ನೆಲಮಂಗಲದ ಕುವೆಂಪು ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಚಾಲಕನಾಗಿ ಕೆಲಸ ನಿರ್ವಹಣೆ ಮಾಡ್ಕೊಂಡಿದ್ದ. ಆದರೆ ತಡರಾತ್ರಿ ಕಂಠ ಪೂರ್ತಿ ಮದ್ಯಸೇವಿಸಿ ಪತ್ನಿಯೊಂದಿಗೆ ಜಗಳ ಮಾಡಿಕೊಂಡು ಕೆಟ್ಟು ನಿಂತ ಕ್ಯಾಂಟರ್ ವಾಹನದ ಕಬ್ಬಿಣದ ಆ್ಯಂಗಲ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸುಮಿತ್ರ ಪಬ್ಲಿಕ್ ನೆಕ್ಸ್ಟ್ ನೆಲಮಂಗಲ
Kshetra Samachara
26/07/2022 09:30 pm