ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಉಗ್ರರ ಅಡಗುತಾಣ ಆಗುತ್ತಿದೆಯಾ ಬೆಂಗಳೂರು.?

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತೊಮ್ಮೆ ಉಗ್ರರ ಅಡಗುತಾಣ ಆಗುತ್ತಿದೆಯಾ? ಎನ್ನುವ ಸಂಶಯ ಈಗ ಮೂಡುತ್ತಿದೆ. ಕಾರಣ, ನಿನ್ನೆ ರವಿವಾರ ರಾತ್ರಿ ಬೆಂಗಳೂರಿನ ಜಯನಗರದ ತಿಲಕನಗರದಲ್ಲಿ ಶಂಕಿತ ಅಲ್ ಖೈದಾ ಸಂಘಟನೆಯ ಉಗ್ರನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಿಲಕ ನಗರದ ಬಿಟಿಪಿ ಲೇಔಟ್‌ನಲ್ಲಿ ಒಂದು ಚಿಕ್ಕ ರೂಮಿನಲ್ಲಿ ಮೂವರು ವಾಸಿಸುತ್ತಿದ್ದರು.

ಅಖ್ತರ್ ಹುಸೇನ್ ಮತ್ತು ತನ್ನ ಮೂವರು ಗೆಳೆಯರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ನಾಲ್ವರು ಇದೆ ಏರಿಯಾದಲ್ಲಿ ಹಲವು ವರ್ಷಗಳಿಂದ ಇದ್ದು ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಮೂವತ್ತಕ್ಕೂ ಹೆಚ್ಚು ಪೊಲೀಸರು ಮನೆ ಮೇಲೆ ದಾಳಿ ನಡೆಸಿ ಈ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ತಿಲಕ ನಗರದ ಬಿಟಿಪಿ ಲೇಔಟ್ ನಮ್ಮ ಪ್ರತಿನಿಧಿ ನವೀನ್ ಸ್ಥಳದಿಂದ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

Edited By : Nagesh Gaonkar
PublicNext

PublicNext

25/07/2022 04:58 pm

Cinque Terre

23.81 K

Cinque Terre

0

ಸಂಬಂಧಿತ ಸುದ್ದಿ