ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮದುವೆ ನಿಶ್ಚಯವಾಗಿದ್ದ ಯುವಕ ನೇಣಿಗೆ ಶರಣು

ನೆಲಮಂಗಲ: ಮದುವೆ ನಿಶ್ಚಯವಾಗಿದ್ದ ಯುವಕನೋರ್ವ ಪೋಷಕರ ಅಗಲಿಕೆಯಿಂದ ಮಾನಸಿಕ ಖಿನ್ನತೆಗೊಳಗಾಗಿ ನೇಣು ಹಾಕಿಕೊಂಡು‌ ಆತ್ಮಹತ್ಯೆಗೆ ಶರಣಾದ ಘಟನೆ ನೆಲಮಂಗಲ ನಗರದ ಅರಿಶಿನಕುಂಟೆ ಗ್ರಾಮದಲ್ಲಿ ನಡೆದಿದೆ.

ಇನ್ನೂ ಅರಿಶಿನಕುಂಟೆ ಗ್ರಾಮದ ಕಿರಣ್ 30 ಮೃತ ದುರ್ದೈವಿ. ಮನೆಯಲ್ಲಿ ಯಾರೂ ಇಲ್ಲದಿದ್ದಾಗಾ ಕಿರಣ್ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. 4 ವರ್ಷಗಳ ಹಿಂದಷ್ಟೇ ಕಿರಣ್ ತಾಯಿ‌ ಮೃತಪಟ್ಟಿದ್ದರು. ಆತನ ಎಂಗೇಜ್ಮೆಂಟ್ ಮುಗಿದ 15 ದಿನಕ್ಕೆ ಅಂದ್ರೆ ಒಂದು ತಿಂಗಳ ಹಿಂದೆ ತಂದೆ ಮೃತಪಟ್ಟಿದ್ದರು. ನಿನ್ನೆ ತಂದೆಯವರ ತಿಂಗಳ ತಿಥಿ ಕಾರ್ಯ ಮುಗಿಸಿದ್ರು. ಮುಂದಿನ ತಿಂಗಳು ಮದುವೆ ದಿನಾಂಕ ಕೂಡ ನಿಶ್ಚಯವಾಗಿತ್ತು.ಆದರೂ ಯುವಕನ ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ಸಾಕಷ್ಟು ಗೊಂದಲ್ಲ ಮೂಡಿಸಿದೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
Kshetra Samachara

Kshetra Samachara

25/07/2022 04:02 pm

Cinque Terre

1.48 K

Cinque Terre

0

ಸಂಬಂಧಿತ ಸುದ್ದಿ