ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಭೀಕರವಾಗಿ ಕೊಲೆಯಾಗಿದ್ದ ಹೇಮಂತ್ ಕೇಸ್ ಗೆ ಟ್ವಿಸ್ಟ್: ಬಿಗ್ ಸೀಕ್ರೆಟ್ ರಿವೀಲ್ ಮಾಡ್ತಿದೆ ಪಬ್ಲಿಕ್ ನೆಕ್ಸ್ಟ್

ಬೆಂಗಳೂರು: ಒಂದು ವಾರದ ಹಿಂದೆ ಕೆಂಗೇರಿ ಠಾಣಾ ವ್ಯಾಪ್ತಿಯ ಕೋನಸಂದ್ರ ಬಳಿ ಹೇಮಂತ್ ಎಂಬ ಯುವಕನ ಬರ್ಬರ ಹತ್ಯೆಯಾಗಿತ್ತು. ಗುರುತು ಹಿಡಿಯಲಾಗದ ರೀತಿಯಲ್ಲಿ ಆತನ ತಲೆಯನ್ನ ಜಜ್ಜಿ ಕೊಲೆ ಮಾಡಲಾಗಿತ್ತು. ಆದ್ರೆ ಕೊಲೆಗಾರರು ಆತನ ಸ್ನೇಹಿತರೇ ಇರಬಹುದು ಎಂಬ ಸಂಶಯ ಇತ್ತು. ಇದೀಗ ಹೇಮಂತ್ ಕೊಲೆ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಆ ಬೆಚ್ಚಿ ಬೀಳಿಸುವ ಘಟನೆ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಮಾಹಿತಿ ಕಲೆ ಹಾಕಿದೆ.

ಜುಲೈ 16 ರಂದು ಹೇಮಂತ್ ಬರ್ತಡೇ ಇತ್ತು. ತನ್ನ ಮೂವರು ಗೆಳೆಯರೊಂದಿಗೆ ಆತ ಪಾರ್ಟಿ ಮಾಡ್ತಿದ್ದ. ಪಾರ್ಟಿ ಸಮಯದಲ್ಲಿ ಹರಟೆ ಹೊಡೆಯುತ್ತಿದ್ದ ಗೆಳೆಯರು ರೌಡಿಸಂ ವಿಚಾರಕ್ಕೆ ಬಂದ್ರು. ಆಗ ಹೇಮಂತ್ ಯಾವ ರೌಡಿಗಳು ಇಲ್ಲ. ಏನು ಇಲ್ಲ ಬನ್ರೋ ಅಂತ ಮಾತಾಡಿದ್ದಾನೆ. ಆದ್ರೆ ಪಕ್ಕದಲ್ಲೇ ಕುಳಿತಿದ್ದ ಕುಳ್ಳ ರಿಜ್ವಾನ್ ನ ಶಿಷ್ಯರು ಹೇಮಂತ್ ಮಾತನ್ನ ಕೇಳಿಸಿಕೊಂಡು ಸಿಟ್ಟಾಗಿದ್ದಾರೆ.

ಹೇಮಂತ್ ಪಾರ್ಟಿ ಮುಗಿಸಿ ಗೆಳೆಯರೊಂದಿಗೆ ಹೊರ ಬರ್ತಿದ್ದ ಹಾಗೇ ರೌಡಿ ಕುಳ್ಳ ರಿಜ್ವಾನ್ ಶಿಷ್ಯರು ಹೇಮಂತ್ ನನ್ನ ಕರೆದಿದ್ದಾರೆ. ನಮ್ ಬಾಸ್ ಯಾರು ಅಂತ ನಿಂಗೆ ಗೊತ್ತಿಲ್ವಾ ಅಂತ ಕೇಳಿದ್ದಾರೆ. ಅದ್ಕೆ ಹೇಮಂತ್ ಗೊತ್ತಿಲ್ಲ ಅಂದ. ಇದ್ರಿಂದ ಕೆರಳಿದ ರಿಜ್ವಾನ್ ಶಿಷ್ಯರು ಹೇಮಂತ್ ಮುಖದ ಗುರುತು ಸಿಗದಂತೆ ನೂರಕ್ಕು ಹೆಚ್ಚು ಬಾರಿ ಮಚ್ಚಿನಲ್ಲಿ ಹೊಡೆದಿದ್ದಾರೆ. ದೃಶ್ಯಗಳನ್ನೆಲ್ಲ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಕುಳ್ಳ ರಿಜ್ವಾನ್ ಗೆ ಕಳಿಸಿ ನೋಡಿ ಭಯ್ಯಾ ನೀವೇ ಗೊತ್ತಿಲ್ಲ ಅಂದ ಎತ್ಬಿಟ್ವಿ ಅಂತ ಹೇಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಈ ವಿಚಾರವಾಗಿ ಬಾಯ್ಬಿಟ್ಟ್ರೆ ನಿಮ್ಮನ್ನು ಕೊಲೆ ಮಾಡ್ತೀವಿ ಅಂತ ಹೇಮಂತ್ ಗೆಳೆಯರಿಗೆ ಬೆದರಿಕೆ ಕೂಡಾ ಹಾಕಿದ್ದಾರೆ. ಇತ್ತ ಕೆಂಗೇರಿ ಪೊಲೀಸರು ತನಿಖೆ ನಡೆಸುತ್ತಿರುವಾಗ್ಲೇ ಅತ್ತ ಕೆಂಪೇಗೌಡ ನಗರ ಪೊಲೀಸರು ಶಿವಮೊಗ್ಗದಲ್ಲಿ ಕುಳ್ಳ ರಿಜ್ವಾನ್ ನ ಅರೆಸ್ಟ್ ಮಾಡಿದ್ದಾರೆ. ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸುವಾಗ ಹೇಮಂತ್ ಕೊಲೆಯ ರಹಸ್ಯ ಹೊರಬಿದ್ದಿದೆ. ಒಟ್ಟಿನಲ್ಲಿ ಈ ಅಂಡರ್ ವರ್ಲ್ಡ್ ಅಟ್ಟಹಾಸಕ್ಕೆ ಅಮಾಯಕನೊಬ್ಬ ಬಲಿಯಾಗಿದ್ದು ನಿಜಕ್ಕೂ ದುರಂತ

ರಂಜಿತಾಸುನಿಲ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು

Edited By : Somashekar
Kshetra Samachara

Kshetra Samachara

24/07/2022 08:49 pm

Cinque Terre

8.69 K

Cinque Terre

1

ಸಂಬಂಧಿತ ಸುದ್ದಿ