ಬೆಂಗಳೂರು:ಶೋಕಿ ಜೀವನಕ್ಕೆ ಆಟೋ ಮತ್ತು ಬೈಕ್ ಕದಿಯುತ್ತಿದ್ದ ಐನಾತಿ ಕಳ್ಳನನ್ನ ಭಾರತಿನಗರ ಪೊಲೀಸರು ಬಂಧಿಸಿದ್ದಾರೆ.ಆಟೋ ಮತ್ತು ದ್ವಿಚಕ್ರವಾಹನಗಳನ್ನರ ಟಾರ್ಗೇಟ್ ಮಾಡ್ತಿದ್ದ ಈತ ಒಂದಷ್ಟು ದುಡ್ಡಿಗೆ ಆಟೋವನ್ನ ತರಕಾರಿ ಮಾರುವವರಿಗೆ ಮಾರಾಟ ಮಾಡ್ತಿದ್ದ.
ಬಂಧಿತ ಆರೋಪಿ ಶಫಿಉಲ್ಲಾ ಕೆ ಜೆ ಹಳ್ಳಿ ವಿನೋಬನಗರ ನಿವಾಸಿಯಾಗಿದ್ದು ಬಾಣಸವಾಡಿಯಲ್ಲಿ ಅಟೋ ಕಳ್ಳತನ ಮಾಡಿದ್ರೆ ಭಾರತಿನಗರದಲ್ಲಿ ಕೆಟಿಎಂ ಕಳ್ಳತನ ಮಾಡಿದ್ದ. ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಆರೋಪಿಯನ್ನ ಪೊಲೀಸ್ರು ಬಂಧಿಸಿದ್ದು
ಬಂಧಿತ ಆರೋಪಿಯಿಂದ 3ಲಕ್ಷ ಬೆಲೆ ಬಾಳುವ ಆಟೋ ಮತ್ತು ಬೈಕ್ ಸೀಜ್ ಮಾಡಿದ್ದಾರೆ.
Kshetra Samachara
23/07/2022 03:30 pm