ಯಲಹಂಕ: ಜುಲೈ 16ರಂದು ಹುಣಸಮಾರನಹಳ್ಳಿ ಹಂದಿ ಸಾಕಣೆ ಕೇಂದ್ರಕ್ಕೆ ನುಗ್ಗಿದ್ದ ಹಂದಿ ಕಳ್ಳರು ಮಾಲೀಕ ಹಾಗೂ ಮಗನ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಚಿಕ್ಕಜಾಲ ಇನ್ ಸ್ಪೆಕ್ಟರ್ ಪ್ರವೀಣ್ ಹಾಗೂ ಅವರ ತಂಡ DCP ಅನೂಪ್ ಶೆಟ್ಟಿ ಮಾರ್ಗದರ್ಶನದಲ್ಲಿ ಕೊಪ್ಪಳಕ್ಕೆ ತೆರಳಿದ್ದರು.
ಮಹೀಂದ್ರ ಬೊಲೆರೋ ಗೂಡ್ಸ್ ಗಾಡಿಯಲ್ಲಿ ಮಲಗಿದ್ದ 5 ಜನರಲ್ಲಿ ಹೊರಗಡೆ ಇದ್ದ ಮೂವರನ್ನು ಮಫ್ತಿಯಲ್ಲಿದ್ದ ಪೊಲೀಸರು ಬಂಧಿಸಿದ್ದರು. ಈ ವೇಳೆ ಇಬ್ಬರು, ಗಾಡಿಯನ್ನು ಜೋರಾಗಿ ಓಡಿಸಿಕೊಂಡು ಹೋಗಲು ಯತ್ನಿಸಿ ನೀರಾವರಿ ಕಾಲುವೆಗೆ ಇಳಿಸಿ ತಪ್ಪಿಸಿಕೊಳ್ಳಲು ಯತ್ನಿಸಿದರು.
ಈ ಸಂದರ್ಭ ಹಂದಿ ಕಳ್ಳರು ಪೊಲೀಸರ ಮೇಲೆಯೇ ಮಚ್ಚಿನಿಂದ ಹಲ್ಲೆಗೆ ಮುಂದಾದರು. ಆಗ ಜೀವ ರಕ್ಷಣೆಗಾಗಿ ಇನ್ ಸ್ಪೆಕ್ಟರ್ ಪ್ರವೀಣ್ ಇಬ್ಬರ ಕಾಲಿಗೆ ಗುಂಡಿಕ್ಕಿ, ಒಟ್ಟು 5 ಜನರನ್ನು ಬಂಧಿಸಿದ್ದಾರೆ. ಈ ಘಟನೆ ಸಂಬಂಧ ಚಿಕ್ಕಜಾಲ ಇನ್ ಸ್ಪೆಕ್ಟರ್ ಪ್ರವೀಣ್, ಕೊಪ್ಪಳದ ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆ ಮುಂದುವರೆದಿದೆ ಎಂದು ಡಿಸಿಪಿ "ಪಬ್ಲಿಕ್ ನೆಕ್ಸ್ಟ್" ಗೆ ತಿಳಿಸಿದ್ದಾರೆ.
-ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಯಲಹಂಕ
PublicNext
23/07/2022 08:32 am