ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೊಬೈಲ್‌ಗಾಗಿ ಜೀವ ತೆಗೆದ ಮೂವರು ಹಂತಕರ ಬಂಧನ!

ಆನೇಕಲ್:ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ಸನು ಥಾಮಸ್ ಕೊಲೆ ಪ್ರಕರಣ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಜಿಗಣಿ ಪೊಲೀಸರು ಯಶಸ್ವಿಯಾಗಿದ್ದಾರೆ

ಪ್ರಮುಖ ಆರೋಪಿ ಪೂಜಿಗನಪಾಳ್ಯ ನಿವಾಸಿ ಪುಟ್ಟರಾಜು.ಇನ್ನಿಬ್ಬರು ಕಾಲೇಜು ವಿದ್ಯಾರ್ಥಿಗಳಾದ ಗೋಪಿ (16) ಚಿನ್ನಯ್ಯನಪಾಳ್ಯ ವಾಸಿಯಾದ ಶ್ರೀನಿವಾಸ್ (17) ಬಂಧಿತ ಅರೋಪಿಗಳು.

ಇದೇ ತಿಂಗಳು 14 ನೇ ತಾರೀಖಿನಂದು ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೇರಳ ಮೂಲದ ಸನು ಥಾಮಸ್ ಎಂಬಾತನನ್ನು ಮೊಬೈಲ್ ಸುಲಿಗೆಗೆ ಬಂದಿದ್ದ ಮೂರು ಜನ ಕಿರಾತಕರು ಅಡ್ಡಗಟ್ಟಿ

ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಇನ್ನು ಆರೋಪಿಗಳ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಬ್ಬರು ಪರಪ್ಪನ ಅಗ್ರಹಾರ ಜೈಲಿಗೆ ಮತ್ತಿಬ್ಬರನ್ನು ಬಾಲಾಪರಾಧಿ ಸೆರೆವಾಸಕ್ಕೆ ಕಳಿಸಲಾಗಿದೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
PublicNext

PublicNext

21/07/2022 05:27 pm

Cinque Terre

34.02 K

Cinque Terre

0

ಸಂಬಂಧಿತ ಸುದ್ದಿ