ವರದಿ- ಬಲರಾಮ್ ವಿ
ಬೆಂಗಳೂರು: ಗೃಹ ಬಳಕೆ ವಸ್ತುಗಳ ಖರೀದಿಯ ನಂತರ ಪೇಟಿಎಂ ಮಾಡಿರುವುದಾಗಿ ಸುಳ್ಳು ಹೇಳಿ ಯಾಮಾರಿಸುತ್ತಿದ್ದ ವಂಚಕಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೆಆರ್ ಪುರ ಠಾಣೆ ವ್ಯಾಪ್ತಿಯ ಕುಂಬಾರ ಬೀದಿಯಲ್ಲಿ ನಡೆದಿದೆ.
ಈ ಚಾಲಾಕಿ ಮಹಿಳೆಯ ಹೆಸರು ತಿಳಿದು ಬಂದಿಲ್ಲ. ಈಕೆ ಹಲವು ದಿನಗಳಿಂದ ಇದೇ ರೀತಿ ಹಲವು ಅಂಗಡಿಗಳಿಗೆ ಹೋಗಿ ತನಗೆ ಬೇಕಾದ ಗೃಹ ಬಳಕೆಯ ವಸ್ತುಗಳನ್ನು ಖರೀದಿಸಿದ ನಂತರ ಪೇಟಿಎಂ ಮೂಲಕ ಹಣ ಪಾವತಿಸಿರುವುದಾಗಿ ಮೊಬೈಲ್ ತೋರಿಸಿ ಪರಾರಿಯಾಗುತ್ತಿದ್ದಳು!
ಅಂಗಡಿ ಮಾಲೀಕರು ಮೊಬೈಲ್ ನೋಡುವುದರೊಳಗೆ ಈ ಮೋಸಗಾತಿ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದಳು. ಪ್ರತಿ ಬಾರಿಯಂತೆ ಮೋಸ ಮಾಡಲು ಹೋಗಿ ಇದೀಗ ಸಾರ್ವಜನಿಕರ ಕೈಗೆ ಸಿಕ್ಕಾಕಿಕೊಂಡಿದ್ದು, ಪೊಲೀಸರ ಅತಿಥಿಯಾಗಿದ್ದಾಳೆ.
PublicNext
16/07/2022 09:44 pm