ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನವಾಗಿರೋ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಆಸ್ತಿ ವಿವರ ಕೆದಕಿರೋ ಸಿಐಡಿ ಅಧಿಕಾರಿಗಳಿಗೆ ಶಾಕ್ ಆಗಿದೆ. ಅಮೃತ್ ಪೌಲ್ ಅಕ್ರಮ ಹಣದಲ್ಲೇ ಜಮೀನು ಖರೀದಿಯಲ್ಲಿ ಬ್ಯುಸಿಯಾಗಿದ್ದರು ಹಾಗೂ ತಂದೆ ಹೆಸರಲ್ಲಿ ಸಾಕಷ್ಟು ಜಮೀನು ಖರೀದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಮೃತ್ ಪೌಲ್ ತಂದೆ ನೇತಾರಾಮ್ ಬನ್ಸಾಲ್ ಹೆಸರಿನಲ್ಲಿ ಭಾರೀ ಪ್ರಮಾಣದ ಆಸ್ತಿಯಿರೋ ಪತ್ತೆಯಾಗಿದೆ. ಪೌಲ್ ಕೇಂದ್ರ ವಿಭಾಗದ ಐಜಿಪಿ ಆಗಿದ್ದಾಗ ಕೋಟಿ ಕೋಟಿ ಆಸ್ತಿ ಗಳಿಸಿದ್ದಾರೆ ಎನ್ನಲಾಗಿದೆ. ಚಿಕ್ಕಬಳ್ಳಾಪುರದ ನಂದಿ ಹೋಬಳಿಯ ಹೊಸಹುಡ್ಕದಲ್ಲಿ ಫಾರ್ಮ್ಹೌಸ್, ಸರ್ವೇ ನಂಬರ್ 247ರಲ್ಲಿ 4 ಎಕರೆ ಭೂಮಿ ತಂದೆ ನೇತಾರಾಮ್ ಹೆಸರಲ್ಲಿ ನೋಂದಣಿಯಾಗಿದೆ. ಫಾರ್ಮ್ ಹೌಸ್ ಸುತ್ತಮುತ್ತಲ 8 ಎಕರೆ ಭೂಮಿಯನ್ನು ಇತ್ತೀಚೆಗೆ ಪೌಲ್ ಖರೀದಿಸಿದ್ದಾರೆ ಎಂಬ ಮಾಹಿತಿ ಇದೆ.
ಶಿಡ್ಲಘಟ್ಟ ಬಳಿಯ ನೆಲಪ್ಪನಹಳ್ಳಿ ಬಳಿ 8 ಎಕರೆ 29 ಗುಂಟೆ, ನೆಲಪ್ಪನಹಳ್ಳಿ ಸರ್ವೇ ನಂಬರ್ 49 ರಲ್ಲಿ 4 ಎಕರೆ 39 ಗುಂಟೆ ಜಾಗವನ್ನು ತಂದೆ ಕೊಂಡುಕೊಂಡಿದ್ದಾರೆ ಎನ್ನಲಾಗಿದೆ. ಸರ್ವೇ ನಂಬರ್ 50ರಲ್ಲಿ 3 ಎಕರೆ 30 ಗುಂಟೆ ಜಾಗ ಪೌಲ್ ತಂದೆ ಹೆಸರಲ್ಲಿದೆ. ಈ ಎಲ್ಲಾ ಆಸ್ತಿ ವಿವರವನ್ನು ನೋಡಿ ಸಿಐಡಿ ತನಿಖಾ ತಂಡ ದಂಗಾಗಿದೆ. ಸದ್ಯ ಸಿಐಡಿ ಚಾರ್ಜ್ ಶೀಟ್ನಲ್ಲೂ ಅಕ್ರಮ ಆಸ್ತಿ ವಿವರ ಉಲ್ಲೇಖಿಸಲು ಸಜ್ಜಾಗಿದೆ.
ಈ ಮಧ್ಯೆ ಸಿಐಡಿ ವಿಚಾರಣೆ ವೇಳೆ ಅಮೃತ್ ಪೌಲ್ ಹೆಂಡತಿ,ಮಕ್ಕಳನ್ನು ನೋಡಬೇಕು. ಮನೆ ಊಟ ಕೊಡಿ ಎಂದು ಸಿಐಡಿಗೆ ಮನವಿ ಮಾಡಿದ್ದಾರಂತೆ. ಇನ್ನೂ ಪೌಲ್ ಆಸ್ತಿ ವಿವರ ಸದ್ಯದ ಮಟ್ಟಿಗೆ ಇಷ್ಟಿದೆ. ಇನ್ನೂ ಸಿಐಡಿ ಅಧಿಕಾರಿಗಳು ಇನ್ನೇಷ್ಟೂ ಆಸ್ತಿ ಪತ್ತೆಹಚ್ಚುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
PublicNext
16/07/2022 03:30 pm