ಬೆಂಗಳೂರು :ಆಂಧ್ರಪ್ರದೇಶದದಿಂದ ಗಾಂಜ ಮತ್ತು ಆ್ಯಶಿಸ್ ಆಯಿಲ್ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಮಹಿಳೆಯರು ಸೇರಿ ಮೂವರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಮಿತ್ರಾ, ಸೀತಾ ಹಾಗೂ ಚಂದ್ರಶೇಖರ್ ಬಂಧಿತರು.ಆಂಧ್ರಪ್ರದೇಶದ ತುನಿಯಿಂದ ಮಾದಕ ಪದಾರ್ಥಗಳನ್ನ ಕಡಿಮೆ ಬೆಲೆಗೆ ಖರೀದಿಸಿ ತರುತ್ತಿದ್ದ ಆರೋಪಿಗಳು, ಬೆಂಗಳೂರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.ಮಾಗಡಿ ರಸ್ತೆಯಲ್ಲಿ ದಂಧೆಯಲ್ಲಿ ತೊಡಗಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿಯ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಮೂವರೂ ಆರೋಪಿಗಳನ್ನ ಬಂಧಿಸಿದ್ದಾರೆ.
ಬಂಧಿತರಿಂದ 90 ಲಕ್ಷ ಮೌಲ್ಯದ 940 ಗ್ರಾಂ ಆ್ಯಶಿಶ್ ಆಯಿಲ್ ಹಾಗೂ 10 ಕೆಜಿ ಗಾಂಜಾ, ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Kshetra Samachara
16/07/2022 02:05 pm