ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ಪ್ರೇಮಿಗಳನ್ನು ಬೆದರಿಸಿ ಸುಲಿಗೆ: ಮೂರು ಜನ ಖದೀಮರು ಜೈಲಿಗೆ

ದೇವನಹಳ್ಳಿ: ದೇವನಹಳ್ಳಿ ಬೈಪಾಸ್ ಹೋಟೆಲ್ ನಲ್ಲಿ ಊಟ ಮಾಡಿ ರಾತ್ರಿ 10-30ರ ಸುಮಾರಿಗೆ ಬೆಂಗಳೂರಿನತ್ತ ತೆರಳುತ್ತಿದ್ದ ಪ್ರೇಮಿಗಳನ್ನು ಸುಲಿಗೆ ಮಾಡಿದ್ದ ಮೂರು ಜನ ಖದೀಮರನ್ನ ದೇವನಹಳ್ಳಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ದೂರುದಾರ ತನ್ನ ಗೆಳತಿಯೊಂದಿಗೆ ಜುಲೈ 8ರಂದು ದೇವನಹಳ್ಳಿ ಬೈಪಾಸ್ ನ ಹೋಟೆಲ್ ನಲ್ಲಿ‌ ಊಟ ಮುಗಿಸಿ ಬೆಂಗಳೂರಿನತ್ತ ತೆರಳಿದ್ದರು. ಈ ವೇಳೆ ಡಾಬಾ ಗೇಟ್ ಬಳಿ ಮಾರುತಿ 800ನಲ್ಲಿ ಬಂದ ಮೂರು ಜನ‌ ಸುಲಿಗೆಕೋರರು, ಯುವಕನ‌ ಕತ್ತಿನಲ್ಲಿದ್ದ 10ಗ್ರಾಂ ಚಿನ್ನದ ಸರ ಕದ್ದು, ರಾಡ್ ನಿಂದ ಹಲ್ಲೆ ಮಾಡಿ, ಸಮೀಪದ ATM ಬಳಿ ಕರೆದೊಯ್ದು 15000 ನಗದು ಡ್ರಾಮಾಡಿ ಎಸ್ಕೇಪ್ ಆಗಿದ್ದರು.. ಈ ಬಗ್ಗೆ ಹಲ್ಲೆಗೊಳಗಾದ ವ್ಯಕ್ತಿ ದೇವನಹಳ್ಳಿ ಠಾಣೆಗೆ ದೂರು ನೀಡಿದ್ದನು.

ದೂರಿನನ್ವಯ ದೇವನಹಳ್ಳಿಯ ಅಕ್ಕುಪೇಟೆ ನಿವಾಸಿಗಳಾದ ಅನಿಲ್ ಕುಮಾರ್ @ದೇವ್ರು, ಸುಬ್ರಹ್ಮಣಿ @ ಸುಟ್ಟ ಮತ್ತು ಪವನ್ ಎಂಬ ಮೂರು ಜನರನ್ನು ಬಂಧಿಸಿ, ಸುಲಿಗೆ ಮಾಡಿದ್ದ ಮಾಲನ್ನು, ಮಾರುತಿ 800 ಕಾರು & ಮೊಬೈಲ್ಗಳನ್ನ ವಶಕ್ಕೆ ಪಡೆದಿದ್ದಾರೆ.

ದೇವನಹಳ್ಳಿಯ ಈ ಮೂರು ಜನ ಖದೀಮರು ಯಾವುದೇ ಕೆಲಸ ಮಾಡದೆ ಸುತ್ತಾಡಿಕೊಂಡು ಮೊದಲ ಸಲ ಸುಲಿಗೆ ಮಾಡಿ ಜೈಲು ಸೇರಿದ್ದಾರೆ.

ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ದೇವನಹಳ್ಳಿ..

Edited By : Somashekar
PublicNext

PublicNext

15/07/2022 03:01 pm

Cinque Terre

28.98 K

Cinque Terre

0

ಸಂಬಂಧಿತ ಸುದ್ದಿ