ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮನೆ ಕಳ್ಳತನವೇ ಫುಲ್‌ ಟೈಮ್‌ ಕೆಲ್ಸ; ಎಸ್ಕೇಪ್ ವೇಳೆ ಗ್ರಾಮಸ್ಥರ ಕೈವಶವಾದ ಸುರೇಶ

ನೆಲಮಂಗಲ: ಆತ ಕಳ್ಳತನವನ್ನೇ ಫುಲ್ ಟೈಂ ಕೆಲ್ಸ ಮಾಡ್ಕೊಂಡಿದ್ದ. ರಾಜ್ಯದ ವಿವಿಧ ಠಾಣೆಗಳಲ್ಲಿ ಬರೋಬ್ಬರಿ 9 ಕಳ್ಳತನ ಕೇಸ್ ದಾಖಲಾಗಿತ್ತು. ಹಗಲೊತ್ತೇ ಸ್ಕೆಚ್ ಹಾಕಿ ಕಳ್ಳತನ ಮಾಡುತ್ತಿದ್ದ ಈತನೀಗ ಮನೆಗಳ್ಳತನಕ್ಕೆ ಯತ್ನಿಸುತ್ತಿದಾಗಲೇ ಊರಿನವರ ಕೈಲಿ ತಗ್ಲಾಕೊಂಡು ಜೈಲುಪಾಲಾಗಿದ್ದಾನೆ.

ಈತನ ಹೆಸ್ರು ಸುರೇಶ. ಊರ ಮುಂದಿರೋ ದೇವಾಲಯಕ್ಕೆ ಕೈ ಮುಗಿದು ಪಕ್ಕಾ ಪ್ಲಾನ್ ಮಾಡಿ ಮನೆಗಳ್ಳತನಕ್ಕೆ ನುಗ್ಗಿದ್ದ. ಕದ್ದು ಇನ್ನೇನು ಎಸ್ಕೇಪ್ ಆಗಬೇಕು... ಆಗ ಒಂದು ಸಣ್ಣ ಸುಳಿವು ಸಿಕ್ಕಿದೆ ಅಂತ ಗೊತ್ತಾಗಿದ್ದೇ ತಡ, ಅಡುಗೆ ಮನೆ ಚಿಮಣಿಯೊಳಗೆ ತೂರಿದ ಆತ ತಪ್ಪಿಸಿಕೊಳ್ಳೋಕೆ ಆಗ್ದಂಗೆ ಗ್ರಾಮಸ್ಥರ ಕೈಲಿ ಲಾಕ್ ಆಗಿಯೇ ಬಿಟ್ಟ.

ನೆಲಮಂಗಲ ತಾಲೂಕಿನ ತ್ಯಾಗದಹಳ್ಳಿಯ ರಾಮಚಂದ್ರ ಎಂಬುವರ ಮನೆಯಲ್ಲಿ ಕಳ್ಳತನ ಮಾಡಲು ಹೋಗಿದ್ದ ಆರೋಪಿ ಸುರೇಶ್ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ. ಸುರೇಶ್ ಸ್ಥಳೀಯ ಬಾಲಪರಾಧಿಯೊಬ್ಬನ ನೆರವಿನೊಂದಿಗೆ ಊರಿನ ಮನೆಗೆ ಸ್ಕೆಚ್ ಹಾಕಲು ಪ್ಲಾನ್ ಮಾಡಿದ್ದಾನೆ. ಪ್ಲಾನ್‌ನಂತೆ ತ್ಯಾಗದಹಳ್ಳಿ ನಿವಾಸಿ ಮತ್ತು ಗೊಲ್ಲಹಳ್ಳಿ ಗ್ರಾಪಂ ಸದಸ್ಯ ರಾಮಚಂದ್ರ ಮನೆ ಕಟ್ಟಿಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ತಿಳಿದಿತ್ತು.

ಇವರ ಮನೆಯಲ್ಲಿ ಹಣ ಇದ್ದೇ ಇರುತ್ತೆ ಅನ್ನೋ ಖಚಿತ ಮಾಹಿತಿ ಆಧರಿಸಿ, ಮನೆ ಬಳಿ ಹೋಗಿದ್ದ ವೇಳೆ ಸುರೇಶ ಮನೆ ಮುಂದಿನ ರಾಮ ದೇವಾಲಯಕ್ಕೆ ನಮಸ್ಕಾರ ಹಾಕಿ ರಾಮಚಂದ್ರ ಅವರ ಮನೆ ಹಿಂಬದಿಯ ನಾದಿನಿ ಮನೆ ಬಳಿ ಹೋದಾಗ ಬೊಗಳುತ್ತಿದ್ದ ನಾಯಿಗೆ ರಾಡ್‌ ನಿಂದ ಹೊಡೆದು ಮಲಗಿಸಿ, ಮನೆ ಬೀಗ ಹೊಡೆದು ಒಳ ನುಗ್ಗಿ ರೋಲ್ಡ್ ಗೋಲ್ಡ್ ನೆಕ್ಲೆಸ್ ಕದ್ದಿದ್ದಾನೆ.

ಬಳಿಕ ರಾಮಚಂದ್ರ ಅವರ ಮನೆ ಬೀಗ ಹೊಡೆದು ಒಳ ನುಗ್ಗಿದ್ದಾನೆ. ಇನ್ನೇನು ಹಣದೊಂದಿಗೆ ಪರಾರಿಯಾಗಬೇಕು ಅನ್ನೋ ಅಷ್ಟರಲ್ಲಿ ಮನೆಯವರು ಆಚೆ ಬಂದು ನೋಡಿದ್ದಾರೆ. ಮನೆಯಲ್ಲಿ ಕಳ್ಳ ಇರೋದು ಕನ್ಫರ್ಮ್ ಆಗ್ತಿದ್ದಂತೆ ಹೊರಗಿಂದ ಬಾಗಿಲು ಹಾಕಿದ್ದಾರೆ. ಇತ್ತ ಸುರೇಶ್, ಮನೆ ಒಲೆ ಮೇಲಿನ ಚಿಮಣಿ ಮೂಲಕ ಹೊರ ಹೋಗಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಮನೆ ಸುತ್ತುವರಿದ ಸ್ಥಳೀಯರು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಿವಮೊಗ್ಗ ಮೂಲದ ಸುರೇಶ್‌ನನ್ನು ವಶಕ್ಕೆ ಪಡೆದ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸ್ರು ಕೇಸ್ ದಾಖಲಿಸಿ, 1 ಲಕ್ಷ ನಗದು ಸಹಿತ 1 ಬೈಕನ್ನು ವಶಕ್ಕೆ ಪಡೆದಿದ್ದಾರೆ. ಸುರೇಶ್ ಗೆ ಸಹಕಾರ ನೀಡಿದ್ದ ಬಾಲಾಪರಾಧಿಯನ್ನೂ ವಶಕ್ಕೆ ಪಡೆದಿದ್ದು, ಸದ್ಯ ಆರೋಪಿಯನ್ನು ಪರಪ್ಪನ ಅಗ್ರಹಾರ ಜೈಲಿಗಟ್ಟಲಾಗಿದೆ.

Edited By : Shivu K
PublicNext

PublicNext

15/07/2022 08:37 am

Cinque Terre

40.54 K

Cinque Terre

0

ಸಂಬಂಧಿತ ಸುದ್ದಿ