ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮನೆಗೆಲಸ ಮಾಡುವ ಸೋಗಿನಲ್ಲಿ ಕಳವು,ಆರೋಪಿ ಬಂಧನ!

ವರದಿ:ಬಲರಾಮ್.ವಿ

ಬೆಂಗಳೂರು:ಮನೆಗೆಲಸ ಮಾಡುವ ಹಾಗೂ ಮಸಾಜ್ ಮಾಡುವ ಸೋಗಿನಲ್ಲಿ ಮನೆಯಲ್ಲಿನ ಆಭರಣ ಕದಿಯುತ್ತಿದ್ದ ಆರೋಪಿತೆಯನ್ನು ವೈಟ್ ಫೀಲ್ಡ್ ವಿಭಾಗದ ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಅಕ್ಕಿಮ್ ಮಣಿ ಬಂಧಿತೆ ಆರೋಪಿ. ಮೂಲತಃ ಆಂಧ್ರ ಪ್ರದೇಶದ ಆನಂತಪುರದ ಉಪ್ಪರಹಳ್ಳಿ ಗ್ರಾಮದವಳು. ಕಳೆದ ಕೆಲ ತಿಂಗಳಗಳ ಹಿಂದೆ ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನೆಕೊಳಲಿನ ಮನೆಯೊಂದರಲ್ಲಿ ಮನೆಗೆಲಸ ಮಾಡುವ ನೆಪದಲ್ಲಿ ಮನೆಗೆ ನುಗ್ಗಿದ ಈ ಮಹಿಳೆ, ಮಸಾಜ್ ಮಾಡುವುದಾಗಿ ಮಹಿಳೆಯೊರ್ವಳ 75 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದಳು.

ಪ್ರಕರಣ ಬೆನ್ನಿಟ್ಟಿದ್ದ ಮಾರತ್ತಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿ ಮಹಿಳೆಯು ನಾಲ್ಕು ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದ್ದು, ಆರೋಪಿತೆಯಿಂದ 271 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

Edited By :
PublicNext

PublicNext

14/07/2022 03:25 pm

Cinque Terre

15.93 K

Cinque Terre

0

ಸಂಬಂಧಿತ ಸುದ್ದಿ