ಬೆಂಗಳೂರು: ಇತ್ತೀಚಿಗೆ ನಗರದಲ್ಲಿ ನಕಲಿ ನಂಬರ್ ಪ್ಲೇಟ್ ಹಾವಳಿ ಹೆಚ್ಚಾಗಿತ್ತು. ಒಂದೇ ನಂಬರ್ ಪ್ಲೇಟ್‌ನ ಎರಡೆರಡು ವಾಹನಗಳು ಓಡಾಡ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿದ್ದ ಸಂಚಾರ ಪೊಲೀಸರು ಇಂದು ಒಂದೇ ನಂಬರ್ ಪ್ಲೇಟ್ ಹೊಂದಿದ್ದ ಎರಡು ಬೈಕ್‌ಗಳನ್ನು ಪತ್ತೆ ಮಾಡಿದ್ದಾರೆ.
ಇಲಿಯಾಸ್ ನಗರದ ಅಲ್ತಾಫ್ ಖಾನ್ ಬ್ಯಾಂಕ್ ಲೋನ್ ಕಟ್ಟೋಕಾಗದೆ ತನ್ನ ಡಿಯೋ ಬೈಕ್ ಹೋಲುವ ಬೇರೊಂದು ಬೈಕ್ ನಂಬರ್ ಬಳಸಿ ಓಡಾಡ್ತಿರೋದು ಪತ್ತೆಯಾಗಿದೆ. ಸುಬ್ರಮಣ್ಯಪುರ ಸಂಚಾರ ಪೊಲೀಸ್ರು ಈ ಬೈಕ್ ಪತ್ತೆಮಾಡಿದ್ದು, ಅಲ್ತಾಫ್ ಚುಂಚಗಟ್ಟದಲ್ಲಿ ವೆಲ್ಡಿಂಗ್ ಕೆಲಸ ಮಾಡ್ತಿದ್ದ. ತನ್ನ ಬೈಕ್ ನಂಬರ್ ಇದ್ರೆ ಸೀಜಿಂಗ್ ಅವರು ಸೀಜ್ ಮಾಡ್ತಾರಂತ ಬೇರೊಬ್ಬರ ನಂಬರು ಬಳಸಿರೋದು ಪತ್ತೆ ಮಾಡಿ ಸುಬ್ರಹ್ಮಣ್ಯ ಪುರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
Kshetra Samachara
12/07/2022 10:57 pm