ಬೆಂಗಳೂರು : ಎಷ್ಟೋ ಬಾರಿ ಜನರು ಟ್ರೇಡಿಂಗ್ ಅಪ್ಲಿಕೇಶನ್ ಗಳಲ್ಲಿ ಕಾಸು ಹಾಕಿ ಕಳೆದುಕೊಂಡಿರುವ ಪ್ರಕರಣಗಳು ಹಲವಾರು ಇದೆ. ಈ ನಕಲಿ ಟ್ರೇಡಿಂಗ್ ಅಪ್ಲಿಕೇಶನ್ ಅವರು ತಮ್ಮ ಅಪ್ಲಿಕೇಶನ್ ಪ್ರಮೋಟ್ ಮಾಡಲು ಸಾಮಾಜಿಕ ತಾಣದ ಫೇಸ್ ಬುಕ್ ಇನ್ಸ್ಟಾಗ್ರಾಂ ಉಪಯೋಗಿಸುತ್ತಾರೆ.
ಇದೇ ರೀತಿ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲಿಕೇಶನ್ ಗಳು ಫುಲ್ ಆಕ್ಟಿವ್ ಆಗಿ ಇರುತ್ತಾರೆ. ಈ ನಕಲಿ ಟ್ರೇಡಿಂಗ್ ಅಪ್ಲಿಕೇಶನ್ ಗಳ ಮುಖ್ಯ ಟಾರ್ಗೆಟ್ ಯುವಕರು. ಯುವಕರಿಗೆ ಸುಲಭವಾಗಿ ಸಿಗುವ ಹಣ ಪಡೆಯಲು ಇಂಥ ಅಪ್ಲಿಕೇಶನ್ ಗಳನ್ನು ಯೂಸ್ ಮಾಡಿ ಅಂತ ಪ್ರಚಾರ ಮಾಡುತ್ತಾರೆ. ಅದನ್ನು ನಂಬಿ ಎಷ್ಟು ಯುವಕರು ಮೋಸ ಕೂಡ ಹೋಗಿದ್ದಾರೆ. ಈ ಪ್ರಚಾರ ಹೇಗೆ ಮಾಡುತ್ತಾರೆ ಗೊತ್ತಾ?.
ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಮಾಡಿ ನಿಮ್ಮ ಅಕೌಂಟ್ ಇಂದ ನೀವು ಹಣ ಗೆದ್ದಿದ್ದೀರಿ ಎಂದು ನಿಮ್ಮ ಫೋಟೋ ಸಮೇತ ನಿಮ್ಮ ಅಕೌಂಟ್ ನಲ್ಲಿ ಇವರು ಪೋಸ್ಟ್ ಮಾಡಿಬಿಡುತ್ತಾರೆ. ಇದೇ ರೀತಿ ಬೆಂಗಳೂರಿನ ಬಿಟಿಎಮ್ ಲೇಔಟಿನಲ್ಲಿ ಯುವಕನ ಇನ್ಸ್ಟ್ರಾಗ್ರಾಮ್ ಅಕೌಂಟ್ ಹ್ಯಾಕ್ ಮಾಡಿ ಸುಳ್ಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ನೀವು ಕೂಡ ನಿಮ್ಮ ಇನ್ಸ್ಟ್ರಾಗ್ರಾಮ್ ನಲ್ಲಿ ಬರುವ ಲಿಂಕ್ ಗಳನ್ನು ಓಪನ್ ಮಾಡುವ ಮುನ್ನ ಯೋಚನೆ ಮಾಡಿ ಇಲ್ಲವಾದರೆ ನಿಮ್ಮ ಅಕೌಂಟ್ ಕೂಡಾ ಹ್ಯಾಕ್ ಮಾಡಿ ನಿಮ್ಮ ಸ್ನೇಹಿತರಿಗೆ ಮೋಸ ಮಾಡಬಹುದು ಯಾವುದಕ್ಕೂ ಹುಷಾರಾಗಿರಿ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
12/07/2022 10:14 pm