ಬೆಂಗಳೂರು:ಕೆಲಸಕ್ಕೆ ಹೋಗುವ ಗಂಡಸರು, ಪತ್ನಿಯನ್ನ ಮನೆಯಲ್ಲಿ ಒಂಟಿಯಾಗಿ ಬಿಟ್ಟು ಹೋಗುವ ಮುನ್ನ ಒಮ್ಮೆ ಯೋಚಿಸಬೇಕು.ಯಾಕಂದ್ರೆ ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ರಾಬರಿ ಮಾಡೋ ಗ್ಯಾಂಗ್ ಸಿಟಿಯಲ್ಲಿ ಆಕ್ಟೀವ್ ಆಗಿದೆ.
ಗಂಡಸರು ಹೊರಗೆ ಹೋಗೊದನ್ನೆ ಕಾಯೋ ಈ ಗ್ಯಾಂಗ್ ಮಹಿಳೆಯರು ಒಂಟಿ ಆಗಿದ್ದಾಗಲೇ ಮನೆಗೆ ನುಗ್ಗಿ ರಾಬರಿ ಮಾಡ್ತಾರೆ.
ಸದ್ಯ ಜೆಸಿನಗರದ ಡಾಕ್ಟರ್ ಒಬ್ಬರ ಮನೆಗೆ ನುಗ್ಗಿ ದರೋಡೆ ಮಾಡಿರೋ ನಾಲ್ವರು ದರೋಡೆಕೋರರು, ಡಾಕ್ಟರ್ ಪತ್ನಿಗೆ ಬೆದರಿಸಿ ಬಾಯಿಗೆ ಬಟ್ಟೆ ತುರುಕಿ ಹಣ ಒಡವೆ ಕೊಡುವಂತೆ ಧಮ್ಕಿ ಹಾಕಿದ್ದಾರೆ.
ತಾಯಿಯ ಕಿರುಚಾಟ ಕೇಳಿ ಮಗಳು ರೂಮಿನಿಂದ ಹೊರ ಬಂದಾಗ, ಮಗಳನ್ನು ಕಟ್ಟಿ ಹಾಕಿ ಕೊಲೆ ಮಾಡೊದಾಗಿ ಬೆದರಿಕೆ ಹಾಕಿ, ಮಾಂಗಲ್ಯ ಸರ ಸೇರಿ 15 ಲಕ್ಷ ದುಡ್ಡು, 300 ಗ್ರಾಂ ಚಿನ್ನ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ಸದ್ಯ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದು ಜೆ.ಸಿ.ನಗರ ಪೊಲೀಸ್ರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Kshetra Samachara
11/07/2022 12:46 pm