ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸೈಕಲ್ ಜಾಥಾದಲ್ಲಿ ಹೆಣ್ಮಕ್ಕಳ ಮೈ ಮುಟ್ಟಿ ಎಸ್ಕೇಪ್ ಆಗಿದ್ದ ಡೆಲಿವರಿ ಬಾಯ್ ಅರೆಸ್ಟ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೈಕಲ್ ಜಾಥಾದಲ್ಲಿ ಮಹಿಳೆಯರು ಸೈಕ್ಲಿಂಗ್ ಮಾಡುವಾಗ ಮೈಮುಟ್ಟಿ ವಿಕೃತಿ ಮೆರೆಯುತ್ತಿದ್ದವ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ರಾಯಚೂರು ಮೂಲದ ಗಂಗಾಧರ್ ಬಂಧಿತ ಆರೋಪಿಯಾಗಿದ್ದು, ಸದಾಶಿವನಗರ ಸೇರಿದಂತೆ ಎರಡು ಪೊಲೀಸ್​ ಠಾಣೆಯಲ್ಲಿ ಈ ಕಾಮುಕನ ಮೇಲೆ ಎಫ್​ಐಆರ್​​ ದಾಖಲಾಗಿತ್ತು. ಸಿಸಿಟಿವಿಯಲ್ಲಿ ಗಂಗಾಧರ್‌ ಚಲನವಲನ ಕೂಡ ಸೆರೆಯಾಗಿತ್ತು. ಬೈಕಿನಲ್ಲಿ ಬರುತ್ತಿದ್ದ ಈತ ಹೆಣ್ಣುಮಕ್ಕಳ ಮೈ-ಕೈ ಮುಟ್ಟಿ ಎಸ್ಕೇಪ್ ಆಗುತ್ತಿದ್ದ. ನಗರದ ವೈಯಾಲಿಕಾವಲ್ ಸುತ್ತಮುತ್ತ ಈತ ಓಡಾಡುತ್ತಿದ್ದ. ಜುಲೈ 3ರಂದು ಸೈಕ್ಲಿಂಗ್ ಜಾಥಾ ಮಾಡುತ್ತಿದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಫುಡ್ ಡೆಲಿವರಿ ಮಾಡುವ ನೆಪದಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಕಾಮುಕ ಹೆಣ್ಣುಮಕ್ಕಳ ಜತೆ ಅನುಚಿತವಾಗಿ ನಡೆದುಕೊಂಡಿದ್ದ. ಸದ್ಯ ಸದಾಶಿವನಗರ ಪೊಲೀಸರು ಈತನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

Edited By : Vijay Kumar
Kshetra Samachara

Kshetra Samachara

09/07/2022 11:59 am

Cinque Terre

1.89 K

Cinque Terre

0

ಸಂಬಂಧಿತ ಸುದ್ದಿ