ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜೂಜು ಅಡ್ಡೆಗೆ ದಾಳಿ; ಇನ್ಸ್‌ಪೆಕ್ಟರ್ ಮೇಲೆ ಹಲ್ಲೆಗೈದ ಜೆಡಿಎಸ್‌ ಮುಖಂಡ & ಪಟಾಲಂ!

ನೆಲಮಂಗಲ: ಆ ಊರಲ್ಲಿ ಪೊಲೀಸರಿಗೆ ಜೂಜು ಅಡ್ಡೆಯೊಂದರ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಹೆಚ್ಚು ಹಣ ಹೂಡಿ ಜೂಜಾಟ ಆಡ್ತಿರೋದು ಗೊತ್ತಾದ ಕೂಡ್ಲೇ ಪೊಲೀಸ್ರು ದಾಳಿ ನಡೆಸಿದ್ರು. ಆದ್ರೆ, ದಾಳಿ ವೇಳೆ ಜೂಜುಕೋರರು ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆಯೇ ಹಲ್ಲೆ ನಡೆಸಿದ್ದು, ಆರೋಪಿಗಳು ಈಗ ಜೈಲು ಪಾಲಾಗಿದ್ದಾರೆ.

ಹೀಗೆ ಆಸ್ಪತ್ರೆ ಬೆಡ್‌ ಮೇಲೆ‌ ಚಿಕಿತ್ಸೆ ಪಡೆಯುತ್ತಿರೋ ಇನ್ಸ್‌ಪೆಕ್ಟರ್, ಮನೆ ಬಳಿ ಎಸ್ಪಿ ತಪಾಸಣೆ... ಈ ದೃಶ್ಯ ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರ ಠಾಣೆ ವ್ಯಾಪ್ತಿಯಲ್ಲಿ. ಹೌದು... ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಇವ್ರು ನೆಲಮಂಗಲ ಟೌನ್ ಠಾಣೆ ಇನ್ಸ್‌ಪೆಕ್ಟರ್ ಎ.ವಿ. ಕುಮಾರ್.

ನಿನ್ನೆ ರಾತ್ರಿ ನೆಲಮಂಗಲ ಎಸ್‌ಬಿ ಕಾನ್ಸ್‌ಟೇಬಲ್ ಬಸವರಾಜುಗೆ‌ ನೆಲಮಂಗಲ ನಗರದ (ಕೋಟೆ ಬೀದಿ) ಚೆನ್ನಕೇಶವ ಬಡಾವಣೆಯಲ್ಲಿ ಜೂಜಾಟದ ಗ್ಯಾಂಗ್‌, ಭಾರಿ ಹಣ ಹೂಡಿ ಜೂಜಾಡ್ತಿರೋ ಮಾಹಿತಿ ಬಂದಿತ್ತು. ಆದ್ದರಿಂದ ನೆಲಮಂಗಲ ಟೌನ್ ಪೊಲೀಸ್ ಇನ್ಸ್‌ಪೆಕ್ಟರ್ ಕುಮಾರ್ ಹಾಗೂ ತಂಡ, ಜೂಜು ಅಡ್ಡೆ ಮೇಲೆ ರೇಡ್‌ ಮಾಡಲು ಮುಂದಾದ್ರು. ಆದ್ರೆ, ಜೂಜುಕೋರರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ!

ಪೊಲೀಸ್ ರೇಡ್ ವೇಳೆ‌, ಜೆಡಿಎಸ್ ಮುಖಂಡ ಹನುಮಂತ ರಾಜು ಜೂಜು ಆಡಿಸುತ್ತಿರುವುದು ಕಂಡು ಬಂದಿದ್ದು, ಈ ಸಂದರ್ಭ ಪೊಲೀಸ್ರು ಹಾಗೂ ಆರೋಪಿಗಳ ಮಧ್ಯೆ ವಾಕ್ಸಮರ ನಡೆದಿದೆ. ಈ ಜೂಜುಕೋರರನ್ನು ಬಂಧಿಸಲು ಮುಂದಾದ ವೇಳೆ ಆರೋಪಿಗಳು ಇನ್ಸ್‌ಪೆಕ್ಟರ್ ಕುಮಾರ್ ಮೇಲೆ ಹಲ್ಲೆಗೈದಿದ್ದಾರೆ.‌

ಹಲ್ಲೆ ಮಾಡಿದ ಜೆ‌ಡಿಎಸ್ ಮುಖಂಡ ಹನುಮಂತ ರಾಜು, ಬೇವಿನಗುಡ್ಡೆಗೌಡ, ಜಗದೀಶ್ ಕೆ., ಉಮೇಶ, ರಾಜೇಂದ್ರ, ಶೇಖರ್, ರಂಗಣ್ಣ, ಗಂಗರಾಜು, ಮುನಿರಾಜು, ಗಿರೀಶ್ ಸಹಿತ ಒಟ್ಟು 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ. ನೆಲಮಂಗಲ‌ ಟೌನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್ಪಿ ಕೋನ ವಂಶಿಕೃಷ್ಣ ಭೇಟಿ ನೀಡಿ ಹಲ್ಲೆಗೊಳಗಾದ ಇನ್ಸ್‌ಪೆಕ್ಟರ್ ಕುಮಾರ್‌ ಅವ‌ರ ಆರೋಗ್ಯ ವಿಚಾರಿಸಿದರು.

Edited By : Nagesh Gaonkar
PublicNext

PublicNext

07/07/2022 09:12 pm

Cinque Terre

58.15 K

Cinque Terre

0

ಸಂಬಂಧಿತ ಸುದ್ದಿ