ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ತುಷಾರ್ ಗಿರಿನಾಥ್ ಹೆಸರಿನಲ್ಲಿ ಹಲವರ ಬಳಿ ಹಣ ಪಡೆದು ವಂಚಿಸಲಾಗಿದೆ.
ತಾನು ತುಷಾರ್ ಗಿರಿನಾಥ್ ಎಂದು ಹಲವು ಜನರಿಗೆ ವಾಟ್ಸಾಪ್ ಮೂಲಕ ಮೆಸೇಜ್ ಮಾಡಿ ವಂಚಿಸಿದ್ದಾರೆ. ಬಿಲ್ಡರ್‌ಗಳಿಗೆ, ಇತರೆ ಕಂಪನಿಗಳ ಮುಖ್ಯಸ್ಥರಿಗೆ ಹಾಗೂ ಹಲವು ಕೆಳ ಹಂತದ ಅಧಿಕಾರಿಗಳಿಗೆ ಮೆಸೇಜ್ ಮಾಡಿ, ಗೂಗಲ್ ಪೇ ಮೂಲಕ ಹಣ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. 7076522681 ನಂಬರ್‌ನಲ್ಲಿ ಹಣಕ್ಕಾಗಿ ಬೇಡಿಕೆ ಇಡಲಾಗಿದೆ.
ಈ ಬಗ್ಗೆ ಸ್ವತಃ ಕಮಿಷನರ್ ತುಷಾರ್ ಗಿರಿನಾಥ್ ಅವರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಈ ನಂಬರ್ ಹಾಗೂ ಹೀಗೆ ಕರೆ ಮಾಡಿ ಬಾಕಿ ಹಣ ಕಟ್ಟಿ ಎಂದು ತಾನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ನಲ್ಲಿ ದೂರು ಕೊಟ್ಟು ಖದೀಮರ ಬಂಧನಕ್ಕೆ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಆಗ್ರಹಿಸಿದ್ದಾರೆ.
Kshetra Samachara
07/07/2022 03:18 pm