ಬೆಂಗಳೂರು: ಇಡೀ ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ರೌಡಿಶೀಟರ್ ಲಕ್ಷ್ಮಣನ ಮರ್ಡರ್ ಕೇಸ್ ಪ್ರಮುಖ ಆರೋಪಿ ಚೇತನ್ @ ಹಂದಿ ಚೇತೂ ಜೈಲಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಇವನ ತಮ್ಮ ಚಂದನ್ ಕೂಡ ಸದ್ಯ ಜೈಲಲ್ಲಿ ಅಣ್ಣನ ಜೊತೆಗೆ ಸೇರಿಕೊಂಡಿದ್ದಾನೆ.
ಅಣ್ಣನಂತೆ ಅಡ್ಡದಾರಿ ಹಿಡಿದ ತಮ್ಮ ಚಂದನ್, ಅಪ್ರಾಪ್ತ ಹುಡುಗರನ್ನು ಜೊತೆಗೆ ಹಾಕ್ಕೊಂಡು ರಾಬರಿಗೆ ಇಳಿದಿದ್ದ. ನೆಲಮಂಗಲ ಹೈವೇಯಲ್ಲಿ ಲಾರಿಗಳನ್ನು ಪಾರ್ಕ್ ಮಾಡಿದ್ದ ಲಾರಿ ಚಾಲಕರನ್ನು ಟಾರ್ಗೆಟ್ ಮಾಡ್ತಿದ್ದ ಆರೋಪಿಗಳು, ಪೆಪ್ಪರ್ ಸ್ಪ್ರೇ ಹೊಡೆದು ಮೊಬೈಲ್ ದೋಚುತ್ತಿದ್ರು.
ಇದ್ರ ಜೊತೆಗೆ ರೋಡ್ ಸೈಡ್ ನಲ್ಲಿ ಪಾರ್ಕ್ ಮಾಡ್ತಿದ್ದ ಟೂ ವೀಲರ್ ಕದ್ದು ಪರಾರಿಯಾಗ್ತಿದ್ರು. ಕಳೆದ ಕೆಲ ದಿನಗಳಿಂದ ಕೃತ್ಯವೆಸಗಿ ಎಸ್ಕೇಪ್ ಆಗ್ತಿದ್ದ ರಾಬರಿ ಗ್ಯಾಂಗ್ ನ್ನು ನೆಲಮಂಗಲ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ರಾಜೀವ್ ಆಂಡ್ ಟೀಂ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ 22 ಮೊಬೈಲ್, 7 ದ್ವಿಚಕ್ರವಾಹನಗಳನ್ನ ಸೀಝ್ ಮಾಡಿದ್ದಾರೆ.
PublicNext
06/07/2022 05:48 pm