ಬೊಮ್ಮನಹಳ್ಳಿ : ಜೈಲ್ ನಲ್ಲಿನ ಅಕ್ರಮಗಳನ್ನ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಬೆಳ್ಳಂ ಬೆಳಗ್ಗೆ ಡಿಸಿಪಿ ಸಿಕೆ ಬಾಬಾ ನೇತೃತ್ವದಲ್ಲಿ ಜೈಲಿನೊಳಗೆ ಕಾರ್ಯಾಚರಣೆ ನಡೆಸಲಾಯಿತು.
ಇನ್ನು ಸಜಾ ಬಂಧಿಗಳ ಬ್ಯಾರಕ್ ಗಳಲ್ಲಿ ತಪಾಸಣೆ ನಡೆಸಿದ್ದು ತಪಾಸಣೆ ವೇಳೆ 1 ಸಿಮ್, 3 ಮೆಮೋರಿ ಕಾರ್ಡ್ , 1 ಪೆನ್ ಡ್ರೈವ್ 75ಸಾವಿರ ರೂ ನಗದು, ಪಾತ್ರೆಗಳಿಂದ ತಯಾರಿಸಿದ 4 ಚಾಕು, ಚಾರ್ಚಿಂಗ್ ವೈರ್ಸ್, 2 ಹೆಡ್ ಪೋನ್ ಪೊಲೀಸ್ ವಶಕ್ಕೆ ಪಡೆಯಲಾಗಿದೆ .ಇನ್ನು ಈ ಕಾರ್ಯಾಚರಣೆಯಲ್ಲಿ 80 ಮಂದಿ ಪೊಲೀಸರಿಂದ ತಪಾಸಣೆ ಮಾಡಲಾಯಿತು.
Kshetra Samachara
03/07/2022 08:05 pm