ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರಾಯಿಸಿದ ಎಂಬ ಕಾರಣಕ್ಕಾಗಿ ತಮ್ಮನನ್ನು ಕೊಂದ ಅಣ್ಣ

ವರದಿ- ಬಲರಾಮ್ ವಿ

ಬೆಂಗಳೂರು: ಗುರಾಯಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ತನ್ನ ಸ್ವಂತ ತಮ್ಮನನ್ನೆ ಬರ್ಬರವಾಗಿ ಕೊಲೆಗೈದಿರುವ ಘಟನೆ ಕೆಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಿಯಾಂಕ ನಗರದಲ್ಲಿ ನಡೆದಿದೆ. ಪ್ರೀಯಾಂಕನಗರದ ನಿವಾಸಿ ಬಾಲು(26) ಕೊಲೆಯಾದ ದುರ್ದೈವಿ. ರಾಮಕೃಷ್ಣ (30) ಬಂಧಿತ ಆರೋಪಿ. ಬಾಲು ಹಾಗೂ ರಾಮಕೃಷ್ಣ ಮೂಲತಃ ತಮಿಳುನಾಡಿನ ಮಧುರೈದವರು.

ಹಲವು ವರ್ಷಗಳಿಂದ ಕೆಆರ್ ಪುರದ ಪ್ರಿಯಾಂಕ ನಗರದಲ್ಲಿ ತಂದೆ ತಾಯಿ ಜೊತೆಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಮೃತ ಬಾಲು ಫೈಟಿಂಗ್ ಕೆಲಸ ಮಾಡುತ್ತಿದ್ದು, ಆರೋಪಿ ರಾಮಕೃಷ್ಣ ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದ, ಕ್ಷುಲ್ಲಕ ಕಾರಣಕ್ಕೆ ಇಬ್ಬರು ನಡುವೆ ಆಗಾಗ್ಗೆ ಜಗಳ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಇಂದು ಮಧ್ಯಾಹ್ನ 1:30ರ ಸುಮಾರಿಗೆ ಇಬ್ಬರು ಮನೆಯಲ್ಲಿ ಇದ್ದು, ಈ ವೇಳೆ ಗುರಾಯಿಸಿ ನೋಡಿದ್ದಾನೆಂದು ಕುಪಿತಗೊಂಡ ಆರೋಪಿ ರಾಮಕೃಷ್ಣ ಕ್ಯಾತೆ ತೆಗೆದು ತಮ್ಮನ ಜೊತೆ ಜಗಳ ಶುರು ಮಾಡಿಕೊಂಡಿದ್ದ. ಏಕೆ ಗುರಾಯಿಸುತ್ತೀಯಾ ಎಂದು ಪ್ರಶ್ನಿಸಿ ಇಬ್ಬರು ನಡುವೆ ಮಾತಿಗೆ ಮಾತು ಜಗಳ ನಡೆದು ಅತಿರೇಕಕ್ಕೆ ತಿರುಗಿ ಕುಪಿತಗೊಂಡ ಆರೋಪಿ ರಾಮಕೃಷ್ಣ ಸ್ವಂತ ಸಹೋದರನನ್ನು ತಂದೆ ತಾಯಿ ಎದುರಲ್ಲೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ.

ಕೊಲೆಗೈದು ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ತಕ್ಷಣ ಸಾರ್ವಜನಿಕರ ಸಹಾಯದೊಂದಿಗೆ ಕೆಆರ್ ಪುರ ಪೊಲೀಸರು ಬೆನ್ನತ್ತಿ ಅವಲಹಳ್ಳಿ ಸಮೀಪ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Edited By : Nirmala Aralikatti
PublicNext

PublicNext

02/07/2022 09:44 pm

Cinque Terre

29.68 K

Cinque Terre

1

ಸಂಬಂಧಿತ ಸುದ್ದಿ