ಬೆಂಗಳೂರು: ಆಕೆ ಐದು ವರ್ಷಗಳ ಹಿಂದೆ ಸಾಫ್ಟ್ ವೇರ್ ಇಂಜಿನಿಯರ್ ಜೊತೆ ಸಪ್ತಪದಿ ತುಳಿದಿದ್ಲು. ಮುದ್ದಾದ ಮಗು,ಗಂಡನೊಂದಿಗೆ ಸುಖ ಸಂಸಾರ ನಡೆಸ್ತಾ ಸಂತೋಷದಿಂದಲೇ ಇದ್ಲು. ಆದ್ರೆ ಇತ್ತೀಚೆಗೆ ಆಕೆಗೆ ಕಾಣಿಸಿಕೊಂಡ ಅನಾರೋಗ್ಯದಿಂದ ಖಿನ್ನತೆಗೊಳಗಾಗಿ ಮುದ್ದಾದ ಮಗುವನ್ನ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆ ದುರಂತ ಕಥೆಯ ಚಿತ್ರಣ ಇಲ್ಲಿದೆ ನೋಡಿ.
ಈ ಪೋಟೋದಲ್ಲಿ ಕಾಣ್ತಿರೋ ಇವ್ರ.ಆದರ್ಶ ದಂಪತಿ ಹಾಗೂ ಅವ್ರ ಮುದ್ದಾದ ಮಗು. ಉಡುಪಿ ಜಿಲ್ಲೆ ಬ್ರಹ್ಮಾವರ ಮೂಲದ ಈ ಮುದ್ದಾದ ಕುಟುಂಬ, ರಾಜರಾಜೇಶ್ವರಿ ನಗರದ ಮಂತ್ರಿ ಆರ್ಫೇನಾ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ರು.
ಇನ್ನು ಮೃತ ದೀಪಾ ಪತಿ ಆದರ್ಶ್ ಜಯನಗರ ಸಮೀಪದ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಕೆಲಸ ಮಾಡ್ತಿದ್ರೆ, ಪತ್ನಿ ದೀಪಾ ಹೌಸ್ ವೈಫ್ ಆಗಿದ್ರು. ಪತಿಗೆ ಬರ್ತಿದ್ದ ಸಂಪಾದನೆಯಲ್ಲಿ ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಅನ್ನೊ ಮಾತಿನಂತೆ ಸಂತೋಷದಿಂದ ಸಂಸಾರ ಸಾಗಿಸ್ತಿದ್ರು.
ಎಲ್ಲವೂ ಚೆನ್ನಾಗಿ ಸಾಗ್ತಿರಬೇಕಾದ್ರೆ ದೀಪಾಳಿಗೆ ಹೆರಿಗೆ ಬಳಿಕದ ಕೆಲ ಅನಾರೋಗ್ಯ ಕಾಣಸಿಕೊಂಡಿತ್ತು. ಅದಲ್ಲದೇ ಕಳೆದ ಒಂದು ವಾರದಿಂದ ತೀವ್ರ ಜ್ವರ ಹಾಗೂ ಹೊಟ್ಟೆ ನೋವು ಭಾದಿಸ್ತಿತ್ತು.ಇನ್ನು ಚಿಕಿತ್ಸೆ ಪಡೆದ್ರು ಹೊಟ್ಟೆ ನೋವು ಕಡಿಮೆಯಾಗಿರ್ಲಿಲ್ಲವಂತೆ. ಕಷ್ಟವನ್ನ ಯಾರ ಬಳಿಯಾದ್ರೂ ಹೇಳಿಕೊಳ್ಳೋಣ ಅಂದ್ರೆ ಅಪಾರ್ಟ್ಮೆಂಟ್ ನಲ್ಲಿ ಇದ್ದಿದ್ದು ಮಾತ್ರ ಗಂಡ, ಹೆಂಡತಿ, ಮಗು ಮಾತ್ರ.
ಹೀಗಾಗಿ ತನ್ನ ನೋವನ್ನ ಯಾರ ಬಳಿಯೂ ಹೇಳಿಕೊಳ್ಳಲಾಗದೇ ಖಿನ್ನತೆಗೊಳಗಾಗಿದ್ದ ದೀಪಾ ಸಾಯೋ ನಿರ್ಧಾರ ಮಾಡಿದ್ದಾಳೆ. ನಾನು ಸತ್ತರೆ, ನನ್ನ ಮಗು ಒಂಟಿಯಾಗುತ್ತೆ ಅಂತ ತಿಳಿದು ತನ್ನೊಂದಿಗೆ ಮಗುವನ್ನ ಕರೆದುಕೊಂಡೋಗಲು ನಿರ್ಧರಿಸಿದ್ದಾಳೆ. ತನ್ನ ನಿರ್ಧಾರದಂತೆ ನಮ್ಮ ಸಾವಿಗೆ ಯಾರು ಕಾರಣರಲ್ಲ.ನನಗೆ ಕಾಡ್ತಿದ್ದ ಅನಾರೋಗ್ಯದಿಂದ ನಾನು ಸಾವಿಗೆ ಶರಣಾಗುತ್ತಿದ್ದೇನೆಂದು ಡೆತ್ ನೋಟ್ ಬರೆದಿಟ್ಟಿದ್ದಾಳೆ.ಬಳಿಕ ನಿನ್ನೆ ರಾತ್ರಿ ತನ್ನ ಮಗಳು ಮೂರುವರೆ ವರ್ಷದ ರಿಯಾಳ ಕುತ್ತಿಗೆಗೆ ವೇಲ್ ಬಿಗಿದ ದೀಪಾ ಫ್ಯಾನಿಗೆ ನೇಣು ಹಾಕಿ, ಕೊನೆಗೆ ತಾನೂ ಅದೇ ಫ್ಯಾನಿಗೆ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅತ್ತ ಕೆಲಸ ಮುಗಿಸಿಕೊಂಡ ಪತಿ ಆದರ್ಶ, ಮನೆಗೆ ಏನಾದ್ರೂ ತೆಗೆದುಕೊಂಡ ಬರ್ಬೇಕಾ ಅಂತ ಕೇಳಲು ಎಷ್ಟೇ ಫೋನ್ ಮಾಡಿದ್ರು ದೀಪಾ ಪೋನ್ ಪಿಕ್ ಮಾಡಿಲ್ಲ. ಆಗ ದೀಪಾ ತಂಗಿಗೆ ಪೋನ್ ಮಾಡಿದ್ದು, ಬಂದು ನೋಡಿದಾಗ ಬೆಡ್ ರೂಮಲ್ಲಿ ಮೃತ ದೇಹಗಳು ಕಂಡಿದೆ.
ಅಷ್ಟರಲ್ಲಾಗಲೇ ಪತಿಯೂ ಬಂದಿದ್ದು, ಹೆಂಡ್ತಿ,ಮಗು ನೇತಾಡ್ತಿರೋದು ಕಣ್ಣಿಗ ಬಿದ್ದಿದೆ. ಬಳಿಕ ಅಪಾರ್ಟ್ಮೆಂಟ್ ನಿವಾಸಿಗಳ ಸಹಾಯದಿಂದ ಪೊಲೀಸ್ರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ರಾಜರಾಜೇಶ್ವರಿನಗರ ಪೊಲೀಸ್ರು,ಸ್ಥಳ ಪರಿಶೀಲನೆ ನಡೆಸಿ,ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನ ವಾರಸುದಾರರಿಗೆ ಒಪ್ಪಿಸಿ, ಹತ್ಯೆ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಿಕೊಂಡು ತನಿಖೆ ಮುಂದುವರೆಸಿದ್ದಾರೆ.
-ರಂಜಿತಾಸುನಿಲ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
01/07/2022 08:17 pm