ಬೆಂಗಳೂರು: ಹೆಣ್ಣೂರು, ಬಾಣಸ್ವಾಡಿ ಆಯ್ತು ಈಗ ಬೆಂಗಳೂರು ದಕ್ಷಿಣ ಬಸವನಗುಡಿಗೂ ವಿದೇಶಿ ಡ್ರಗ್ ದಂಧೆ ವ್ಯಾಪಿಸಿದೆ. ಇಲ್ಲಿಯವರೆಗೆ ಪೂರ್ವ ವಿಭಾಗದಲ್ಲೇ ಆಕ್ಟೀವ್ ಆಗಿದ್ದ ನೈಜೀರಿಯನ್ಸ್ ಡ್ರಗ್ ಪೆಡ್ಲರ್ ಗಳು ಪೂರ್ವ ವಿಭಾಗದಲ್ಲಿ ದಂಧೆ ನಡೆಸ್ತಿದ್ರು. ಸದ್ಯ ಇಡಿ ಬೆಂಗಳೂರನ್ನೇ ಟಾರ್ಗೆಟ್ ಮಾಡಲು ಹೊರಟಿರುವ ನೈಜೀರಿಯನ್ಸ್ ನಗರದ ಸಜ್ಜನರ ಏರಿಯಾ ಅಂತ ಕರೆಸಿಕೊಳ್ಳೋ ಬಸವನಗುಡಿಗೂ ಕಾಲಿಟ್ಟಿದ್ದಾರೆ.
ಬಸವನಗುಡಿ ಪೊಲೀಸ್ರಿಗೆ ನೈಜೀರಿಯನ್ ಮೂಲದ ಡ್ರಗ್ ಪೆಡ್ಲರ್ ಪೀಟರ್ ಮೂಸಾ ಸಿಕ್ಕಿಬಿದ್ದಿದ್ದು, ಬಂಧಿತನಿಂದ ಎಂಡಿಎಂಎ ಕ್ರಿಸ್ಟಲ್ , ಟ್ಯಾಬ್ಲೆಟ್ , ಗಾಂಜಾ ,ಕೊಕೇನ್ ಸೇರಿ ಹಲವು ಮಾದರಿಯ 20 ಲಕ್ಷ ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದಾರೆ.
Kshetra Samachara
01/07/2022 07:17 pm