ಬೆಂಗಳೂರು: ನಿನ್ನೆಯಷ್ಟೇ ಹೈ ಕೋರ್ಟ್ ಎಸಿಬಿ ಕಾರ್ಯವೈಖರಿ ಕುರಿತು ಚಾಟಿ ಬೀಸಿತ್ತು. ಈ ಹಿನ್ನೆಲೆ ಚುರುಕುಗೊಂಡ ಎಸಿಬಿ ಇಂದು ಡಿಸಿ ಮಂಜುನಾಥ್ ಗೆ ನೋಟಿಸ್ ಕೊಟ್ಟು 2ನೇ ಬಾರಿ ವಿಚಾರಣೆಗೆ ಕರೆಸಿದ್ದು, ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಬಾರಿಗೆ ವಿಚಾರಣೆ ಕರೆಸಿದ್ದಾರೆ.
ಸತತ ಎರಡು ಗಂಟೆಯಿಂದ ತನಿಖಾಧಿಕಾರಿ ಡಿವೈಎಸ್ಪಿ ಬಸವರಾಜ್ ಮುದ್ದಮ್ ನೇತೃತ್ವದಲ್ಲಿ ಮಂಜುನಾಥ್ ವಿಚಾರಣೆ ನಡೆಸ್ತಿದ್ದಾರೆ. ಮೇ 21ರಂದು ಜಿಲ್ಲಾಧಿಕಾರಿ ಮಂಜುನಾಥ್ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ಉಪ ತಹಶೀಲ್ದಾರ ಮಹೇಶ್, ಗುತ್ತಿಗೆ ನೌಕರ ಚೇತನ್‌ರನ್ನ ಬಂಧನ ಮಾಡಲಾಗಿತ್ತು. ದೂರುದಾರರಿಂದ 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ಇಬ್ಬರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ರು.
ಈ ವಿಚಾರದಲ್ಲಿ ಡಿಸಿ ಮಂಜುನಾಥ್ ಪಾತ್ರದ ಕುರಿತು ಆರೋಪ ಕೇಳಿ ಬಂದ ಹಿನ್ನೆಲೆ, ಮಂಜುನಾಥ್ ರನ್ನ ಎಫ್ ಐಆರ್ ನಲ್ಲಿ ಸೇರಿಸಿ ಎಸಿಬಿ ವಿಚಾರಣೆ ನಡೆಸ್ತಿದ್ದಾರೆ.
ಈ ಹಿನ್ನೆಲೆ ಕಳೆದ ವಾರವಷ್ಟೇ ವಿಚಾರಣೆ ಮಾಡಲಾಗಿತ್ತು.ಈಗ ಮತ್ತೊಮ್ಮೆ 2ನೇ ಬಾರಿ ನೋಟಿಸ್ ನೀಡಿ ವಿಚಾರಣೆ ನಡೆಸ್ತಿದ್ದಾರೆ.
PublicNext
30/06/2022 01:10 pm