ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲವ್ ಮ್ಯಾರೇಜ್‌ ಆಗಿದ್ದ ಕಾನ್‌ ಸ್ಟೇಬಲ್ ಹೆಂಡತಿ ನೇಣಿಗೆ ಶರಣು; "ಸಾವಿನ ಸುತ್ತ ಅನುಮಾನದ ಹುತ್ತ"

ಬೆಂಗಳೂರು: ಇಬ್ಬರೂ ಬಿಎಡ್ ಓದುವಾಗ ಪರಸ್ಪರ ಇಷ್ಟಪಟ್ಟು ಮದುವೆಯಾದವರು. ಜಾತಿ ಬೇರೆಯಾಗಿದ್ದರೂ ಪ್ರೀತಿ ಒಂದೇ ಆಗಿತ್ತು. 2 ವರ್ಷದ ದಾಂಪತ್ಯಕ್ಕೆ ಮಕ್ಕಳಿಲ್ಲ. ಮನೆ ಕಟ್ಟಬೇಕೆಂಬ ಆಸೆ ಚಿಕ್ಕಜಾಲ ಸಂಚಾರಿ ಕಾನ್‌ ಸ್ಟೇಬಲ್ ಹೆಂಡತಿಯ ಅನುಮಾನಾಸ್ಪದ ಸಾವಿಗೆ ಕಾರಣವಾಯ್ತಾ !?

ಈ ಪೋಟೊದಲ್ಲಿನ ದಂಪತಿಯನ್ನು ನೋಡಿದ್ರೆ ಯಾರಿಗೆ ತಾನೇ ಅಸೂಯೆ ಆಗಲ್ಲ ಹೇಳಿ. ಗಂಡ ಪರಮೇಶ್ವರ ನಾಯಕ್ ಬೆಂಗಳೂರಿನ ಚಿಕ್ಕಜಾಲ ಸಂಚಾರಿ ಠಾಣೆ ಕಾನ್‌ ಸ್ಟೇಬಲ್‌ ಆಗಿದ್ದ. ಯಾವುದೇ ದುಶ್ಚಟಗಳಿಲ್ಲದ ಸಭ್ಯಸ್ಥ. ಇನ್ನು ಮುದ್ದಾಗಿ ಬೆಳ್ಳಗೆ ಹಾಲುಗೆನ್ನೆ ಚೆಲುವೆ ಹೆಂಡತಿ ಉಷಾ ಗೌಡ.

ಯಲಹಂಕ ಸಂಚಾರಿ ಠಾಣೆ ವ್ಯಾಪ್ತಿಯ ಕೋಗಿಲಿನಲ್ಲಿ 2 ವರ್ಷಗಳಿಂದ ವಾಸವಿದ್ದರು. ಅದೇನಾಯ್ತೋ 15 ದಿನಗಳಿಂದ ದಂಪತಿ ನಡುವೆ ಮಕ್ಕಳಿಲ್ಲ ಎಂಬ ವಿಚಾರ/ ಮನೆ ಕಟ್ಟಬೇಕೆಂಬ ವಿಷಯಕ್ಕೆ ಪ್ರಾರಂಭವಾದ ಜಗಳ ಉಷಾಳ ಅನುಮಾನಾಸ್ಪದ ಆತ್ಮಹತ್ಯೆಯಲ್ಲಿ ಕೊನೆಯಾಗಿದೆ!

ಉಷಾ ಗೌಡ ಹಾಸನದ ಸೀಗೂರು ಗ್ರಾಮದವರು. ಪರಮೇಶ್ವರ ನಾಯಕನೂ ಹಾಸನದವನೇ. ಬಿಎಡ್ ಓದುವಾಗ ಆದ ಪರಿಚಯ ಸ್ನೇಹ- ಪ್ರೀತಿ ಹೀಗೆ ಮದುವೆ ಮಂಟಪ ಏರಿತ್ತು. ಅಂತರ್ಜಾತಿ ಮದುವೆಯಾದ್ದರಿಂದ ಎರಡೂ ಮನೆ ಕಡೆಯವರು ಅಷ್ಟಕಷ್ಟೇ. ಆದರೆ,‌ 10-15 ದಿನಗಳಿಂದ ಪರಮೇಶ್ವರ ನಾಯಕ್ "ನಿಮ್ಮ‌ ಮಗಳದ್ದು ಜಾಸ್ತಿಯಾಗಿದೆ. ಏನ್ ಮಾಡ್ತಿನೋ‌ ನೋಡಿ"‌ ಎಂಬ ಮಾತು ಉಷಾ ಪೋಷಕರಿಗೆ ಅಳಿಯನೇ ಮಗಳನ್ನು ಸಾಯಿಸಿ ನೇಣಿಗೆ ಹಾಕಿರಬಹುದು ಎಂಬ ಅನುಮಾನ ಹೆಚ್ಚಿಸಿದೆ.

ಉಷಾಗೆ 24 ವರ್ಷ, ಪರಮೇಶ್ವರ ನಾಯಕನದ್ದು 28ರ ಪ್ರಾಯ. ಬಾಳಿ ಬದುಕಬೇಕಿದ್ದ ಜೀವ ಸಣ್ಣ ಅಸಮಾಧಾನ, ಕೋಪಕ್ಕೆ ಒಳಗಾಗಿ ಜೀವನ ಹಾಳು ಮಾಡಿಕೊಂಡಿವೆ. ಏನೇ ಆಗಲಿ ಈ ಸಾವು ಅನುಮಾನ ಮೂಡಿಸಿದ್ದು, ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.

-‌ ಸುರೇಶ್ ಬಾಬು ʼಪಬ್ಲಿಕ್ ನೆಕ್ಸ್ಟ್ʼ ಯಲಹಂಕ

Edited By : Shivu K
Kshetra Samachara

Kshetra Samachara

30/06/2022 09:32 am

Cinque Terre

4.12 K

Cinque Terre

0

ಸಂಬಂಧಿತ ಸುದ್ದಿ