ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ದಂಡುಪಾಳ್ಯದಲ್ಲಿ ಕುಡಿದ ಮತ್ತಿನಲ್ಲಿ ಪರಸ್ಪರ ಒಂದೇ ಕಡೆ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರೆ ಮತ್ತೊಬ್ಬ ಕಾರ್ಮಿಕ ರಾಘವೇಂದ್ರ (25) ವರ್ಷದ ಕಾರ್ಮಿಕನನ್ನು ಭೀಕರವಾಗಿ ಸುತ್ತಿಗೆಯಿಂದ ತಲೆ ಜಜ್ಜಿ ಕೊಲೆ ಮಾಡಿದ್ದಾರೆ. ಮೂಲತಃ ಯಾದಗಿರಿಯ ಜಿಲ್ಲಿಯೆ ಚಿತ್ತಾಪುರದ ರಾಘವೇಂದ್ರ ಕಳೆದ ಕೆಲವು ವರ್ಷಗಳಿಂದ ಹೊಸಕೋಟೆ ಸುತ್ತಾಮುತ್ತಾ ಮನೆ ನಿರ್ಮಾಣ ಕಾಮಗಾರಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಆದರೆ ನೆನ್ನೆ ಕೊಲೆ ಯಾಗಿದ್ದಾನೆ. ಕೊಲೆ ಮಾಡಿದ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ.
ಈಶಾನ್ಯ ಭಾರತ ಅಸ್ಸಾಂನ ಇಬ್ಬರು ಸಹಚರರು ಕೂಲಿ ಕಾರ್ಮಿಕರಾಗಿ ದಂಡುಪಾಳ್ಯ ಸಮೀಪದ ರೂಬಿ ಲೇಔಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಹತ್ತು ದಿನಗಳಿಂದ ರಾಘವೇಂದ್ರ ಸಹ ಇವರ ಟೀಮ್ ನೊಂದಿಗೆ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ. ಆದೇನಾಯ್ತೊ ಏನೊ ನೆನ್ನೆ ರಾತ್ರಿ ಮೂರು ಜನ ಕಂಠಪೂರ್ತಿ ಕುಡಿದು ಈ ರೀತಿ ಕೃತ್ಯವೆಸಗಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವಸ್ಥಾಧಿಕಾರಿ ಕೋನವಂಶಿ ಕೃಷ್ಣ ಮತ್ತು ಹೊಸಕೋಟೆನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೊಲೆ ಮಾಡಿ ಪರಾರಿಯಾಗಿರುವ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆಬೀಸಿದ್ದಾರೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ..
PublicNext
28/06/2022 06:00 pm