ಬೆಂಗಳೂರು: ನಿನ್ನೆ ಸೋಮವಾರ ತಡರಾತ್ರಿ ಆಸ್ಪತ್ರೆ ಮುಂಭಾಗ ನಿಂತಿದ್ದ ಯುವಕರ ಮೇಲೆ ಯುವಕನೋರ್ವ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಬೆಂಗಳೂರಿನ ಮಡಿವಾಳದ ಕಾವೇರಿ ಆಸ್ಪತ್ರೆ ಮುಂಭಾಗ ಈ ಘಟನೆ ನಡೆದಿದೆ. ರಾತ್ರಿ ಹೊಸೂರು ರಸ್ತೆಯ ಖಾಸಗಿ ಕಾಲೇಜಿನಲ್ಲಿ ನಡೆಯುತ್ತಿದ್ದ ಕಾಲೇಜು ಫೆಸ್ಟ್‌ನಲ್ಲಿ ಯುವತಿಯರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದ ಯುವತಿಯರನ್ನು ಅದೇ ಕಾಲೇಜಿನ ಮೂವರು ಯುವಕರು ಮಡಿವಾಳದ ಕಾವೇರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ.
ಈ ವೇಳೆ ಮೂವರು ಯುವಕರು ಆಸ್ಪತ್ರೆ ಹೊರಗೆ ನಿಂತಿದ್ದಾಗ ಮಾಸ್ಕ್ ಧರಿಸಿ ಬಂದ ಯುವಕ ಯುವಕರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಪರಿಣಾಮ ಯುವಕರ ತಲೆಗೆ ಗಾಯವಾಗಿದೆ. ಕೂಡಲೇ ಗಾಯಾಳುಗಳನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಘಟನೆಯಲ್ಲಿ ಯುವಕರು ಗಂಭೀರವಾಗಿ ಗಾಯಗೊಂಡಿದ್ದು ತಲೆಗೆ 7 ಸ್ಟಿಚ್ ಹಾಕಲಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಮಡಿವಾಳ ಪೊಲೀಸರು ಹಲ್ಲೆಗೊಳಗಾದವರಿಂದ ಘಟನೆಯ ಮಾಹಿತಿ ಪಡೆದಿದ್ದಾರೆ.
-ನವೀನ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
Kshetra Samachara
28/06/2022 10:53 am