ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜೈಲಿನಿಂದ ಹೊರಬಂದ ನಾಲ್ಕೇ ತಿಂಗಳಿನಲ್ಲಿ 16 ದ್ವಿಚಕ್ರ ವಾಹನಗಳನ್ನ ಎಗರಿಸಿದ ಕಳ್ಳರ ಬಂಧನ

ಬೆಂಗಳೂರು: ಶೋಕಿ ಜೀವನ ನಿರ್ವಹಣೆಗಾಗಿ ದ್ವಿಚಕ್ರ ವಾಹನ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ನಾಲ್ವರು ಖದೀಮರನ್ನ ಜೆ.ಜೆ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ‌.

ತೌಫಿಕ್ ಪಾಶಾ, ಅಮೀನ್ ಪಾಶಾ, ಅಫ್ರೀದ್ ಖಾನ್ ಹಾಗೂ ಸಲ್ಮಾನ್ ಬಂಧಿತ ಆರೋಪಿಗಳು. ಜೆಜೆ ನಗರ ನಿವಾಸಿಗಳಾದ ಬಂಧಿತರು ಕಳ್ಳತನ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ನಾಲ್ಕು ತಿಂಗಳ ಹಿಂದಷ್ಟೆ ಬಿಡುಗಡೆಯಾಗಿದ್ದರು. ಬಿಡುಗಡೆ ಬಳಿಕ ನಾಲ್ಕು ತಿಂಗಳ ಅಂತರದಲ್ಲಿ 16 ವಿವಿಧ ದ್ವಿಚಕ್ರ ವಾಹನಗಳನ್ನ ಆರೋಪಿಗಳು ಕಳ್ಳತನ ಮಾಡಿದ್ದರು. ಸಿಸಿಟಿವಿ ಇಲ್ಲದ ಜಾಗ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ನಾಲ್ವರೂ ಆರೋಪಿಗಳನ್ನ ಜೆ.ಜೆ‌.ನಗರ ಠಾಣಾ ಪೊಲೀಸರು 10 ಲಕ್ಷ ಮೌಲ್ಯದ 16 ವಿವಿಧ ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.

Edited By : PublicNext Desk
Kshetra Samachara

Kshetra Samachara

25/06/2022 12:07 pm

Cinque Terre

1.1 K

Cinque Terre

0

ಸಂಬಂಧಿತ ಸುದ್ದಿ