ಆನೇಕಲ್: ಭೂಗಳ್ಳರು ಸರ್ಕಾರಿ ಸ್ವಾಮ್ಯದ ಜಾಗದ ಮೇಲೆ ಕಣ್ಣು ಹಾಕುವುದು ಹೆಚ್ಚಾಗುತ್ತಿದೆ. ಅದಲ್ಲದೆ, ರಾತೋರಾತ್ರಿ ಮನೆ ನಿರ್ಮಿಸಿದ್ದಲ್ಲದೆ ಸರ್ಕಾರದ ಕೋಟ್ಯಂತರ ಮೌಲ್ಯದ ಜಾಗವನ್ನು ಗುಳುಂ ಮಾಡಿ ಖಾಸಗಿ ಬಡಾವಣೆಗಳಾಗಿ ಮಾಡಿಕೊಂಡಿದ್ದಾರೆ. ಕಂದಾಯ ಇಲಾಖೆ, ತಹಶೀಲ್ದಾರ್ ಕಂಡೂ ಕಾಣದಂತಿದ್ದಾರೆ!
ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಹೆನ್ನಾಗರ ಗ್ರಾಪಂ ವ್ಯಾಪ್ತಿಯ ಸರ್ವೆ ನಂ. 100 ಕೆರೆಯಂಗಳದಲ್ಲಿ ದಾಖಲೆಗಳಿಲ್ಲದೆ 150 ಮನೆಗಳನ್ನು ನಿರ್ಮಿಸಲು ಅಂದಿನ ಗ್ರಾಪಂ ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ನಮೂನೆ 9 ಮತ್ತು 11 ನೀಡಿ ತಲಾ ಒಂದು 34x40 ನಿವೇಶನಕ್ಕೆ 12 ಲಕ್ಷದಂತೆ 150 ನಿವೇಶನಗಳಿಗೆ ಕೋಟ್ಯಂತರ ರೂ. ಪಡೆದು ಸರ್ಕಾರಿ ಗೋಮಾಳ ಜಾಗಕ್ಕೆ ಭೂ ಮಾಫಿಯಾ ಜೊತೆ ಕೈಜೋಡಿಸಿ ಅಂದಿನ ಅಧಿಕಾರಿಗಳು ಹಾಗೂ ಕೆಲ ಚುನಾಯಿತ ಸದಸ್ಯರು ಈ ಸಂದರ್ಭ ಇದ್ದ ಅಧಿಕಾರಿ ತುಳಸೀನಾಥ್ ಹಾಗೂ ಅಧ್ಯಕ್ಷರ ಹೆಸರು ಥಳಕು ಹಾಕುತ್ತಿದೆ.
ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದ ಜೈಪಾಲ್ ರೆಡ್ಡಿ (ದಾವೆ ನಂ. 4722/2020) ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಮೇಲಾಧಿಕಾರಿಗಳ ಗಮನಕ್ಕೂ ತಾರದೆ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟು ಮಾಡಿದ್ದಾರೆ. ಮಾಹಿತಿ ಹಕ್ಕಿನಲ್ಲಿ ದಾಖಲೆ ಕೇಳಿದರೆ ಕೇರ್ ಮಾಡದ್ದಕ್ಕೆ ಅಧಿಕಾರಿ ತುಳಸಿನಾಥ್ ಗೆ ಮಾಹಿತಿ ಆಯೋಗ ದಂಡ ವಿಧಿಸಿತ್ತು. ಇವರು ಕರ್ತವ್ಯ ನಿರ್ವಹಿಸುತ್ತಿರುವ ಹೆನ್ನಾಗರ ಗ್ರಾಪಂನಿಂದಲೂ ಛೀಮಾರಿ ಹಾಕಿ ಅಲ್ಲಿಂದ ಬಿಡುಗಡೆಗೊಳಿಸಿದೆ.
ಇನ್ನು, ಕಾಚನಾಯಕನಹಳ್ಳಿ ನಿವಾಸಿ ಜೈಪಾಲ್ ರೆಡ್ಡಿಯವರ ಈ ಹೋರಾಟವನ್ನು ದಮನಿಸಲು ಅವರ ಮೇಲೆ ಅಟ್ಯಾಕ್ ಮಾಡಿ, ನಗದು, ದಾಖಲೆಪತ್ರ ಕಸಿದುಕೊಂಡು ಹೋಗಿದ್ದು, ಈ ಬಗ್ಗೆ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ.
ಈ ಕುರಿತು ಸುದ್ದಿ ಮಾಡಲು ಹೋದ ಪಬ್ಲಿಕ್ ನೆಕ್ಸ್ಟ್ ವರದಿಗಾರನ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ರು. ಆದರೂ ನಿಷ್ಪಕ್ಷಪಾತವಾಗಿ ಸುದ್ದಿ ಮಾಡಿದ್ದೇವೆ. ಕೆಲ ಅಧಿಕಾರಿಗಳು ಲಕ್ಷಾಂತರ ದುಡ್ಡು ಪಡೆದು ಸರ್ಕಾರಿ ನಿವೇಶನವನ್ನು ಕೊಟ್ಟವರ ಮೇಲೆ ಕಾನೂನು ಹೋರಾಟ ಮಾಡದೆ ಕಾಲಹರಣ ಮಾಡ್ತಿದ್ದಾರೆ.
- ಹರೀಶ್ ಗೌತಮನಂದ ʼಪಬ್ಲಿಕ್ ನೆಕ್ಸ್ಟ್ʼ ಆನೇಕಲ್
PublicNext
24/06/2022 01:57 pm