ಬೆಂಗಳೂರು: ಗೃಹಪ್ರವೇಶದ ಮನೆಗೆ ನುಗ್ಗಿ ಕೇಳಿದಷ್ಟು ಹಣ ಕೊಡಿ ಅಂತ ಮಂಗಳಮುಖಿಯರ ಡಿಮ್ಯಾಂಡ್ ಮಾಡಿ ನ್ಯೂಸೆನ್ಸ್ ಸೃಷ್ಟಿಸಿದ್ದಾರೆ. ಹಣ ಕೊಡದಿದ್ದಕ್ಕೆ ಗಲಾಟೆ ಮಾಡಿದ ಮಂಗಳಮುಖಿಯರು ಸಂಭ್ರಮದ ಮನೆಯಲ್ಲಿ ಅಶಾಂತಿ ಉಂಟುಮಾಡಿದ್ದಾರೆ.
ಮಂಗಳಮುಖಿಯರ ಕಾಟಕ್ಕೆ ಮನೆ ಮಾಲೀಕ ಬೇಸತ್ತು ಕಂಗಾಲಾಗಿದ್ದಾರೆ. ಬೆಂಗಳೂರಿನ ರಾಮಮೂರ್ತಿ ನಗರದ ಕಲ್ಕೆರೆಯಲ್ಲಿ ಈ ಘಟನೆ ನಡೆದಿದೆ. ಲಕ್ಷ ಲಕ್ಷ ಖರ್ಚು ಮಾಡಿ ಮನೆ ಕಟ್ಟಿದ ಮಾಲೀಕನಿಗೆ ಗೃಹಪ್ರವೇಶದ ದಿನ ನೆಮ್ಮದಿ ಮತ್ತು ಸಂಭ್ರಮ ಇಲ್ಲದಂತೆ ಮಾಡಿದ್ದಾರೆ. ಘಟನೆ ಕುರಿತು ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿದ್ದು, ಒಂದು ಸಾವಿರ ಬೇಡ 25 ಸಾವಿರ ಬೇಕೆಂದು ಹಠ ಮಾಡಿ 25 ಸಾವಿರ ಕೊಡೋಕೆ ಅಗಲ್ಲ ಅಂದಿದ್ದಕ್ಕೆ ದಾಂಧಲೆ ನಡೆಸಿದ ಮಂಗಳಮುಖಿಯರ ಮೇಲೆ ಕ್ರಮ ಜರುಗುಸುವಂತೆ ಮನವಿ ಮಾಡಿದ್ದಾರೆ. ಮನೆಯಲ್ಲಿ ಪಾತ್ರೆ, ಪೂಜಾ ವಸ್ತುಗಳನ್ನ ಎಸೆದು ರಂಪಾಟ ಮಾಡಿ ಅವಾಚ್ಯ ಶಬ್ದಗಳಿಂದ ಮನೆಯವರಿಗೆಲ್ಲ ಬೈದು ಅಸಭ್ಯ ವರ್ತನೆ ತೋರಿದ್ದನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ್ದಾರೆ.
PublicNext
23/06/2022 10:27 pm