ಬೆಂಗಳೂರು: ಬೆಂಗಳೂರು ಈಶಾನ್ಯ ವಿಭಾಗದ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋದ್ರೇಜ್ ಅಪಾರ್ಟ್ಮೆಂಟ್‌ನಲ್ಲಿ ಬೈಕ್ ಪಾರ್ಕ್ ಮಾಡುವ ವಿಚಾರಕ್ಕೆ ಪ್ರಾರಂಭವಾದ ಜಗಳ ಮಾರಣಾಂತಿಕ ಹಲ್ಲೆಗೆ ಕಾರಣವಾಗಿತ್ತು. ಸ್ವಿಗ್ಗಿ ಡೆಲಿವರಿ ಬಾಯ್ ಕಾರ್ತಿಕ್(25) ಎಂಬಾತನೇ ಹಲ್ಲೆ ನಡೆಸಿದ ಆಸಾಮಿ. ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ ಕುಮಾರ್ ನಾಯಕ್(41) ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೆ ನಾಯಕ್ 9 ದಿನದ ನಂತರ ಪ್ರಾಣ ಬಿಟ್ಟಿದ್ದಾನೆ. ಈ ದುರಂತಕ್ಕೆ ಕಾರಣವಾದ ಡೆಲಿವರಿ ಬಾಯ್ ಕಾರ್ತಿಕ್ ಜೈಲು ಪಾಲಾಗಿದ್ದಾನೆ.
ಕಳೆದ ಜೂನ್ 12ರಂದು ಕೊಡಿಗೆಹಳ್ಳಿ ಗೇಟ್ ಗೋದ್ರೆಜ್ ಅಪಾರ್ಟ್‌ಮೆಂಟ್ ಬಳಿ ಡೆಲವರಿ ಬಾಯ್ ಕಾರ್ತಿಕ್ ಬಂದಿದ್ದ. ಈ ವೇಳೆ
ಅಡ್ಡಾದಿಡ್ಡಿ ಬೈಕ್ ಪಾರ್ಕ್ ಮಾಡಿದ್ದ ಸ್ಕೂಟರನ್ನ ಕುಮಾರ್ ನಾಯ್ಕ್ ಸರಿಯಾಗಿ ಪಾರ್ಕ್ ಮಾಡಿದ್ದರು. ಈ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿತ್ತು. ಇದರಿಂದ ಕೋಪಗೊಂಡ ಕಾರ್ತಿಕ್ ಸೆಕ್ಯುರಿಟಿಗೆ ಅವಾಚ್ಯವಾಗಿ ಬೈದು ಹಿಗ್ಗಾಮುಗ್ಗಾ ಥಳಿಸಿಬಿಟ್ಟಿದ್ದ. ಗಾಯಗೊಂಡ ಕುಮಾರ್ ನಾಯ್ಕ್ ಅವರನ್ನು ಯಲಹಂಕ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿತ್ತು.
ಘಟನೆ ನಡೆದ ನಂತರ ಆರೋಪಿ ಕಾರ್ತಿಕ್‌ನ್ನು ವಶಕ್ಕೆ ಪಡೆದ ಅಮೃತಹಳ್ಳಿ ಪೊಲೀಸರು ದೂರು ದಾಖಲಿಸಿದ್ದರು. ಸದ್ಯ ಹಲ್ಲೆ ಪ್ರಕರಣವನ್ನ ಕೊಲೆ ಪ್ರಕರಣವಾಗಿ ಬದಲಿಸಿ ಆರೋಪಿ ಕಾರ್ತಿಕ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ ಬೆಂಗಳೂರು
Kshetra Samachara
22/06/2022 09:32 pm