ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಫೇಸ್ ಬುಕ್‌ ನಲ್ಲಿ ಸಿಕ್ಕಳು-ಸರಿಯಾಗಿ ನಾಮ ಹಾಕಿದಳು-35 ಲಕ್ಷ ಕಳಕೊಂಡ ವ್ಯಕ್ತಿ !

ಬೆಂಗಳೂರು: ಫೇಸ್ ಬುಕ್ ನಲ್ಲಿ ಚೆಂದ ಚೆಂದ ಹುಡುಗಿಯರು ಸಿಕ್ರು ಅಂತ ಸ್ನೇಹ ಬೆಳೆಸೋಕೆ ಮುಂಚೆ ಕೊಂಚ ಜೋಕೆ. ಫೇಸ್​ಬುಕ್​ ಅಲ್ಲಿ ಫ್ರೆಂಡ್​, ಲವ್​ ಅಂತ ನಂಬಿಕೊಂಡ್ರೆ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.ಇಲ್ಲೊಬ್ಬರು ವ್ಯಕ್ತಿ ಫೇಸ್​ ಬುಕ್‌ನಿಂದಾದ ಮಹಿಳೆ ಜತೆಗಿನ ಪರಿಚಯಕ್ಕೆ 35 ಲಕ್ಷ ಬೆಲೆ ತೆತ್ತಿದ್ದಾರೆ.

ಬೆಂಗಳೂರಿನ ನಿವಾಸಿಯಾಗಿರುವ 48 ವರ್ಷದ ವಿನ್ಸೆಂಟ್ ಎಂಬುವರು ಬಜಾಜ್​ ಫೈನಾನ್ಸ್​ ಯೂನಿಟ್​ನಲ್ಲಿ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿರುತ್ತಾರೆ. ಫೇಸ್​ಬುಕ್​ನಲ್ಲಿ ಪರಿಚಯವಾದ ನ್ಯಾನ್ಸಿ ವಿಲಿಯಂ ಎಂಬ ವಿದೇಶಿ ಮಹಿಳೆ 35 ಲಕ್ಷ ಪಡೆದು ವಂಚನೆ ಮಾಡಿದ್ದಾಳೆ. ನ್ಯಾನ್ಸಿ ವಿಲಿಯಂ ಫೇಸ್​ಬುಕ್​ನಲ್ಲಿ ಮೊದಲಿಗೆ ವಿನ್ಸೆಂಟ್​ಗೆ ಫ್ರೆಂಡ್​ ರಿಕ್ವೆಸ್ಟ್​ ಕಳಿಸಿದ್ದಾಳೆ. ನಂತ್ರ ತಾನು ಇಂಗ್ಲೆಂಡಿನವಳು ಎಂದು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸುತ್ತಾಳೆ.

ಈ ಸ್ನೇಹ ಫೋನ್​ ನಂಬರ್​ ಎಕ್ಸ್​ಚೇಂಜ್​ ಮಾಡಿಕೊಳ್ಳುವರೆಗೂ ಹೋಗುತ್ತೆ. ನಂತ್ರ ವಾಟ್ಸ್​ಆ್ಯಪ್​ನಲ್ಲಿ ಚಾಟಿಂಗ್​, ಕಾಲಿಂಗ್​ ಎಲ್ಲ ನಡೆಯುತ್ತೆ. ಹೀಗೆ ಬೆಳೆದ ಸ್ನೇಹ ಮತ್ತಷ್ಟು ಗಾಢವಾಗಿ ಒಟ್ಟಿಗೆ ಸೇರಿ ಬ್ಯುಸಿನೆಸ್​ ಆರಂಭಿಸೋಣ ಅಂತ ಡಿಸ್ಕಸ್ ಆಗಿ ಇಂಗ್ಲೆಂಡ್​ನಿಂದ ಭಾರತಕ್ಕೆ ಬಂದು ಜ್ಯುವೆಲ್ಲರಿ ಬ್ಯಸಿನೆಸ್​ ಮಾಡೋದಾಗಿ ನಂಬಿಸಿದ್ಲು. ಅದಕ್ಕಾಗಿ ಹಣ ಹೂಡಿಕೆ ಮಾಡುವಂತೆ ಕೇಳುತ್ತಾಳೆ. ವಿದೇಶದಲ್ಲಿ ಜ್ಯುವೆಲರಿ ಡೀಲರ್​ ಆಗಿರುವ ನ್ಯಾನ್ಸಿ ಮಾತಿಗೆ ಮರುಳಾದ ವಿನ್ಸೆಂಟ್​ ಹಂತ ಹಂತವಾಗಿ 35 ಲಕ್ಷ ಕೊಟ್ಟು ಕೈ ಸುಟ್ಟುಕೊಂಡಿದ್ದಾನೆ. ಅತ್ತ ಹಣ ಅಕೌಂಟ್ ಗೆ ಬರ್ತಿದಂತೆ ನ್ಯಾನ್ಸಿ ಫೇಸ್​ ಬುಕ್​ ಖಾತೆ ಡಿಲೀಟ್​ ಮಾಡಿ ಲೇಡಿ ನಾಪತ್ತೆಯಾಗಿದ್ದಾಳೆ.

ಮಹಿಳೆಯ ಬಣ್ಣದ ಮಾತಿಗೆ ಮರುಳಾಗಿದ್ದ ವಿನ್ಸೆಂಟ್​ ಈಗ ವಂಚಕಿಯ ವಿರುದ್ಧ ಪೂರ್ವ ವಿಭಾಗದ ಸೆನ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೂರ್ವ ವಿಭಾಗದ ಸೆನ್​ ಪೊಲೀಸರು ಆರೋಪಿ ನ್ಯಾನ್ಸಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Edited By : Nagesh Gaonkar
PublicNext

PublicNext

22/06/2022 09:05 pm

Cinque Terre

36.78 K

Cinque Terre

1

ಸಂಬಂಧಿತ ಸುದ್ದಿ