ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜಸ್ಟ್ 50 ರೂಪಾಯಿಗೆ ಸ್ನೇಹಿತನಿಗೆ ಎದೆಗೆ ಚಾಕು ಇರಿದು ಕೊಲೆ

ಬೆಂಗಳೂರು: ಅವರಿಬ್ಬರು ಫ್ರೆಂಡ್ಸ್, ಇನ್ನು ಫ್ರೆಂಡ್ಸ್ ಅಂದ್ರೆ ಸ್ವಲ್ಪ ಸಲುಗೆ ಜಾಸ್ತಿ ಹಾಗಾಗಿಯೇ ಇವರಿಬ್ಬರು ಜೊತೆ ಜೊತೆಯಾಗಿಯೇ ಇರುತ್ತಿದ್ದರು. ಅದೇ ರೀತಿ ಇಬ್ಬರು ಜೊತೆಯಾಗಿಯೇ ಕ್ರಿಕೆಟ್ ಆಡಿ ಬಂದಿದ್ದರು.

ಬಳಿಕ ಮತ್ತೆ ಜೊತೆಗೂಡಿ ಸೈಬರ್ ಸೆಂಟರ್ ಗೆ ಅಂತಾ ಹೋಗಿದ್ರು.ಸೈಬರ್ ಸೆಂಟರಲ್ಲಿ ಅವರಿಬ್ಬರ ನಡುವೆ ಜಸ್ಟ್ 50 ರೂಪಾಯಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಹೀಗೆ ಕೇವಲ 50ರೂಪಾಯಿಗಾಗಿ ಸ್ನೇಹಿತನ ಎದೆಗೆ ಚಾಕು ಹಾಕಿದ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಬರಹಳ್ಳಿ ಸರ್ಕಲ್ ಬಳಿ ನಡೆದಿದೆ.

ಶಿವಮಾಧು ಎಂಬ 24 ವರ್ಷದ ಯುವಕನನ್ನ ಆತನ ಸ್ನೇಹಿತ ಶಾಂತಕುಮಾರ್ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

ಅಂದ್ಹಾಗೆ ಕೊಲೆಯಾದ ಶಿವಮಾಧು ಮತ್ತು ಆರೋಪಿ ಶಾಂತಕುಮಾರ್ ಇಬ್ಬರೂ ಸ್ನೇಹಿತರು. ಚಿಕ್ಕಂದಿನಿಂದ ಆಡಿ ಬೆಳೆದೋರು. ಕೆಲ ವರ್ಷಗಳ ಹಿಂದೆ ಕುರುಬರ ಹಳ್ಳಿಯಿಂದ ಲಗ್ಗೆರೆ ಬ್ರಿಡ್ಜ್ ಬಳಿ ಶಿಫ್ಟ್ ಆಗಿದ್ರು. ಆದ್ರೂ ಹಳೆ ಅಡ್ಡ ಅಂತಾ ಆಗಾಗ ಈ ಏರಿಯಾ ಕಡೆ ಬರ್ತಿದ್ರು. ಆರೋಪಿ ಜೊಮ್ಯಾಟೋ ಡೆಲಿವರಿ ಬಾಯ್ ಆಗಿದ್ರೆ, ಮೃತ ಶಿವಮಾಧು ಆಟೋ ಡ್ರೈವರ್.

ಕ್ರಿಕೆಟ್ ಆಡಿ ಬಂದವರೇ ಏನೋ ಕೆಲಸಕ್ಕೆಂದು ಸೈಬರ್ ಸೆಂಟರ್ ವೊಂದಕ್ಕೆ ಹೋಗಿದ್ರು. ಈ ವೇಳೆ ಶಾಂತಕುಮಾರ್ ಜೇಬಿನಿಂದ ಶಿವಮಾಧು 50ರೂಪಾಯಿ ತೆಗೆದುಕೊಂಡಿದ್ದಾನೆ. ಯಾಕೋ 50ರೂಪಾಯಿ ತಗೊಂಡೆ ಅದನ್ನು ಕೊಡು ಅಂತಾ ಕೇಳಿದ್ದ ಶಾಂತಕುಮಾರ್ ಗೆ ಶಿವಮಾಧು ಕೊಡಲ್ಲ ಏನಿವಗ ಅಂತ ಸ್ನೇಹದ ಸಲುಗೆಯಲ್ಲೇ ಹೇಳಿದ್ದಾನೆ.

ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು ಜೊತೆಯಲ್ಲೇ ತಂದಿದ್ದ ಚಾಕು ತಗೊಂಡು ಆರೋಪಿ ಶಾಂತಕುಮಾರ್ ಶಿವಮಾಧು ಎದೆಗೆ ಚುಚ್ಚಿ ಎಸ್ಕೇಪ್ ಆಗಿದ್ದಾನೆ. ತೀವ್ರ ರಕ್ತಸ್ರಾವದಿಂದ ನರಳಿದ ಶಿವಮಾಧುನನ್ನ ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ರು ಶಿವಮಾಧು ಸಾವನ್ನಪ್ಪಿದ್ದಾನೆ

ಇನ್ನೂ ಘಟನಾ ಸ್ಥಳಕ್ಕೆ ಬಂದ ಬಸವೇಶ್ವರ ನಗರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್ ಆಧರಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Edited By : Shivu K
PublicNext

PublicNext

22/06/2022 08:35 am

Cinque Terre

38.03 K

Cinque Terre

2

ಸಂಬಂಧಿತ ಸುದ್ದಿ