ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ನಗರದ ಬಿಟಿಎಂ ಲೇಔಟ್ ನಲ್ಲಿ ಬೈಕ್ ಬ್ಯಾಟರಿ ಕಳ್ಳರ ಹಾವಳಿ

ಬೆಂಗಳೂರು : ಒಂದೇ ದಿನ ಸುಮಾರು ಇಪ್ಪಕ್ಕೂ ಹೆಚ್ಚು ಬೈಕ್ ಬ್ಯಾಟರಿ ಕಳ್ಳತನವಾದ ಘಟನೆ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ.

ಹೌದು ಖದೀಮನೊಬ್ಬ ಆಕ್ಟಿವಾ ಸ್ಕೂಟಿನಲ್ಲಿ ಬಂದು ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದಾನೆ. ಅದರಲ್ಲೂ ಬುಲೆಟ್ ಮತ್ತು ಪಲ್ಸರ್ ಬೈಕ್ ಬ್ಯಾಟರಿಗಳನ್ನೇ ಟಾರ್ಗೆಟ್ ಮಾಡಿ ಸುಮಾರು ಐದು ರಿಂದ ಹತ್ತು ಸೆಕೆಂಡ್ ಗಳಲ್ಲಿ ಬ್ಯಾಟರಿ ಎಗರಿಸಿ ಎಸ್ಕೇಪ್ ಆಗಿದ್ದಾನೆ. ಖದೀಮ ಬೈಕ್ ನ ಬ್ಯಾಟರಿಗಳನ್ನು ಕದ್ದು ಗೋಣಿಚೀಲದಲ್ಲಿ ಇಟ್ಟು ಎಸ್ಕೇಪ್ ಆಗಿದ್ದಾನೆ. ಇನ್ನು ಒಂದೇ ದಿನ ಇಷ್ಟೊಂದು ಬ್ಯಾಟರಿ ಕಳ್ಳತನವಾಗಿರುವ ಬಗ್ಗೆ ಜನ ಆತಂಕಗೊಂಡಿದ್ದಾರೆ.

ಸದ್ಯ ಕಳ್ಳನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Nagesh Gaonkar
PublicNext

PublicNext

21/06/2022 04:25 pm

Cinque Terre

30.67 K

Cinque Terre

0

ಸಂಬಂಧಿತ ಸುದ್ದಿ