ಬೆಂಗಳೂರು: ಆತ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಯುವನಟ. ಮಂಡ್ಯ ಮೂಲದ ಆತ ಲಗೋರಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ. ಆದ್ರೆ, ಕೆಲಸದ ಮೇಲೆ ಹೊರ ಹೋಗಿ ಮನೆಗೆ ಬಂದಿದ್ದ ನಟ ಬೆಳಕು ಹರಿಯೋದ್ರಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾನೆ.
ಮಂಡ್ಯ ಜಿಲ್ಲೆ, ಪಾಂಡವಪುರ ಸಮೀಪದ ಹಳೆಬೀಡಿನ ಸತೀಶ್ ತಂದೆ- ತಾಯಿಗೆ ಒಬ್ಬನೇ ಮಗ. ಅಪ್ಪ- ಅಮ್ಮನ ಎದುರಿಸಿ ಪ್ರೀತಿಸಿ ವಿವಾಹವಾಗಿದ್ದ ಸತೀಶ್ ಹೆಂಡ್ತಿ ಎಂಟು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ಲು.
ಇತ್ತೀಚೆಗೆ ಲಗೋರಿ ಎಂಬ ಶಾರ್ಟ್ ಮೂವಿಯಲ್ಲಿ ನಟನಾಗಿ ನಟಿಸಿದ್ದು, ಸಿಕ್ಕಾಪಟ್ಟೆ ಫೇಮಸ್ ಆಗಿತ್ತಂತೆ. ಇದ್ರ ಬೆನ್ನಲ್ಲಿ ಮತ್ತೊಂದು ಪ್ರಾಜೆಕ್ಟ್ ಮಾಡೋಣ ಅಂತ ಕೆಲಸ ಮಾಡ್ತಿದ್ದ ಸತೀಶ್ ಪ್ರತಿದಿನ ಮನೆ ಸೇರೊದಕ್ಕೆ ಮಧ್ಯರಾತ್ರಿಯಾಗ್ತಿತ್ತಂತೆ. ಅದೇ ರೀತಿ ರಾತ್ರಿ 11 ಗಂಟೆ ಸುಮಾರಿಗೆ ತಾನು ವಾಸವಾಗಿದ್ದ ಪಟ್ಟಣಗೆರೆಯ ಈ ಮನೆಗೆ ಬಂದಿದ್ದಾನೆ.
ಸತೀಶ್ ಬಂದಾದ ಬಳಿಕ ಅಂದ್ರೆ 11.30ಕ್ಕೆ ಆರೋಪಿಗಳಾದ ಈ ಸುದರ್ಶನ್, ನಾಗೇಂದ್ರ ಮನೆಗೆ ಎಂಟ್ರಿಯಾಗ್ತಾರೆ. ಸತೀಶ್ ಜೊತೆ ಮಾತನಾಡುವ ನೆಪದಲ್ಲಿ ಬಾಗಿಲು ತೆರೆಸಿ, ಕೆಲ ನಿಮಿಷಗಳ ಬಳಿಕ ಮಾರಕಾಸ್ತ್ರಗಳಿಂದ ಮನ ಬಂದಂತೆ ಕೊಚ್ಚಿ, ಇರಿದು ಹತ್ಯೆಗೈದು ಕಾಲ್ಕಿತ್ತಿದ್ದಾರೆ.
ಇತ್ತ ಬೆಳಗ್ಗೆ ಸತೀಶ್ ಮನೆ ಮುಂದೆ ಬಿದ್ದಿದ್ದ ರಕ್ತದ ಕಲೆಗಳನ್ನ ಕಂಡು ಏನಾಯ್ತೋ ಅಂತ ಬಾಗಿಲು ಬಡಿದಿದ್ದಾರೆ. ಆದ್ರೂ ಬಾಗಿಲು ತೆರೆಯದೇ ಇದ್ದಿದ್ರಿಂದ ಕಿಟಕಿ ತೆರೆದು ನೋಡಿದಾಗ ರಕ್ತದ ದುರ್ವಾಸನೆ ಬಂದಿದೆ. ಕೂಡ್ಲೇ ಅನುಮಾನಗೊಂಡು ಆರ್ ಆರ್ ನಗರ ಪೊಲೀಸ್ರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ರು, ಹಂತಕರು ಲಾಕ್ ಮಾಡಿಕೊಂಡೋಗಿದ್ದ ಬೀಗವನ್ನ ಒಡೆದು ಒಳ ಪ್ರವೇಶಿಸಿದಾಗ ಸತೀಶ್ ವಜ್ರ ಹತ್ಯೆಯಾಗಿರೋದು ಬೆಳಕಿಗೆ ಬಂದಿದೆ.
ಕೂಡ್ಲೇ ಸ್ಥಳ ಪರಿಶೀಲಿಸಿದ ಪೊಲೀಸ್ರಿಗೆ ಕೃತ್ಯಕ್ಕೆ ಬಳಸಿದ್ದ ಹರಿತವಾದ ಲಾಂಗ್ ಸಿಕ್ಕಿದೆ. ಸಿಸಿ ಟಿವಿಯಲ್ಲಿ ಹಂತಕರ ಚಲನವಲನ ಸೆರೆಯಾಗಿದ್ದು, ವಶಕ್ಕೆ ಪಡೆದ ಪೊಲೀಸ್ರು ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಸತೀಶ್ ಹೆಂಡತಿ ಅನಾರೋಗ್ಯಕ್ಕೀಡಾದ ವೇಳೆ ಸರಿಯಾಗಿ ಚಿಕಿತ್ಸೆ ಕೊಡಿಸಿಲ್ಲ. ಹೀಗಾಗಿ ಆಕೆಯ ಸಾವಿಗೆ ಸತೀಶನೇ ಕಾರಣವೆಂಬ ಹಿನ್ನೆಲೆ ಸೇಡು ತೀರಿಸಿಕೊಳ್ಳಲು ಬಾಮೈದನೇ ಹತ್ಯೆಗೈದಿದ್ದಾನೆ.
ಸದ್ಯ ಎಲ್ಲಾ ಆಯಾಮಗಳಲ್ಲೂ ತನಿಖೆ ಆರಂಭಿಸಿರೋ ಆರ್ ಆರ್ ನಗರ ಪೊಲೀಸ್ರು, ಹಂತಕರ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನ ರಚಿಸಿದ್ರು, ವಿಶೇಷ ಕಾರ್ಯಾಚರಣೆ ನಡೆಸಿ ಕೊಲೆಯಾದ 7-8 ತಾಸಿನೊಳಗೆ ಹಂತಕರನ್ನ ಹಿಡಿಯುವಲ್ಲಿ ಸಕ್ಸಸ್ ಆಗಿದ್ದಾರೆ. ಸುದರ್ಶನ್ (ಸೋದರ ಮಾವ) ಮತ್ತು ನಾಗೇಂದ್ರ (A1s ಸೋದರ) ಬಂಧಿತ ಆರೋಪಿಗಳು.
- ರಂಜಿತಾ ಸುನಿಲ್ 'ಪಬ್ಲಿಕ್ ನೆಕ್ಸ್ಟ್' ಬೆಂಗಳೂರು
PublicNext
18/06/2022 10:37 pm