ಬೆಂಗಳೂರು : ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಒಡಿಸ್ಸಾ ಮೂಲದ ದೇಬೆಂದ್ರ ಗೊಲೋರಿ(27) ಬಂಧಿತ. ಇನ್ನು ಬಂಧಿತ ಆರೋಪಿಯಿಂದ 5 ಕೆಜಿ 100 ಗ್ರಾಂ ಮಾಲು ಜಫ್ತಿ ಮಾಡಲಾಗಿದೆ. ಸುಮಾರು 10 ಲಕ್ಷ ಮೌಲ್ಯದ ಗಂಜಾ ವನ್ನ ಜಿಗಣಿ ರಿಂಗ್ ರಸ್ತೆ ಮೂಲಕ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪೊಲೀಸರು ಆರೋಪಿಯನ್ನು ಲಾಕ್ ಮಾಡಿದ್ದಾರೆ. ಈ ಕುರಿತು ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
18/06/2022 08:34 pm