ಬೆಂಗಳೂರು: ಅಪರಾಧ ಕೃತ್ಯದಲ್ಲಿ ಜೈಲು ಸೇರಿರೋ ಮಗನಿಗೆ ಬಿರಿಯಾನಿ ಕೊಡುವ ನೆಪದಲ್ಲಿ ಮಾದಕ ವಸ್ತು ಆ್ಯಶಿಷ್ ಆಯಿಲ್ ನೀಡಲು ಯತ್ನಿಸಿದ್ದ ತಾಯಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಪರ್ವೀನ್ ತಾಜ್ ಬಂಧಿತ ಮಹಿಳೆಯಾಗಿದ್ದು, ಈಕೆಯ ಮಗ ಮಹಮ್ಮದ್ ಬಿಲಾಲ್ ರಾಬರಿ ಸೇರಿದಂತೆ 11 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಹೀಗಾಗಿ ಕೋಣನಕುಂಟೆ ಪೊಲೀಸರು ಬಿಲಾನ್ ನನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ರು. ತಾಯಿ-ಮಗ ಶಿಕಾರಿಪಾಳ್ಯದಲ್ಲಿ ವಾಸವಾಗಿದ್ರು. ಮಗನನ್ನ ನೋಡಲು ಆಗಾಗ ಪರ್ವೀನ್ ಜೈಲಿಗೆ ಬರುತ್ತಿದ್ದಳು. ಆದರೆ ಕಳೆದ 14ರಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ಈಕೆ ಮಗನಿಗೆ ಊಟ ಕೊಡುವ ನೆಪದಲ್ಲಿ ಊಟದ ಬಾಕ್ಸ್ ನಲ್ಲಿ 5 ಲಕ್ಷ ಮೌಲ್ಯದ ಆ್ಯಶಿಷ್ ಆಯಿಲ್ ತಂದಿದ್ದಳು.
ಊಟದ ಜೊತೆ ಬಾಕ್ಸ್ ನಲ್ಲಿ ಜೈಲು ಸಿಬ್ಬಂದಿ ಈಕೆಯನ್ನು ಪರಿಶೀಲಿಸಿದ ವೇಳೆ ಆ್ಯಶಿಸ್ ಆಯಿಲ್ ಪತ್ತೆಯಾಗಿತ್ತು. ತಕ್ಷಣ ಜೈಲು ಸಿಬ್ಬಂದಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ಪರ್ವೀನ್ ತಾಜ್ ಹಾಗೂ ಮಗ ಬಿಲಾಲ್ ಮೇಲೆ ಕೇಸ್ ದಾಖಲಿಸರುವ ಪರಪ್ಪನ ಅಗ್ರಹಾರ ಪೊಲೀಸರು ಬಿಲಾಲ್ ಜೊತೆಗೆ ತಾಯಿ ಫರ್ವಿನ್ ನನ್ನು ಜೈಲಿಗೆ ಕಳುಹಿಸಿದ್ದಾರೆ. ಇನ್ನೂ ಇಷ್ಟು ದೊಡ್ಡ ಮಟ್ಡದ ಆ್ಯಶ್ ಆಯಿಲ್ ನ ಬಿಲಾಲ್ ಒಬ್ಬನೆ ಬಳಕೆಮಾಡಲು ತರಿಸಿಕೊಂಡಿದ್ನಾ ಇಲ್ಲ ಜೈಲು ಒಳಗೇ ಮರಾಟ ಮಾಡಲು ತರಿಸಿದ್ನಾ ಎನ್ನುವುದನ್ನ ಪೊಲೀಸ್ರು ತನಿಖೆಮಾಡ ಬೇಕಿದೆ.
Kshetra Samachara
17/06/2022 03:33 pm