ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರೋಡ್ ಡಿವೈಡರ್ ಕಂಬಕ್ಕೆ ಬೈಕ್ ಡಿಕ್ಕಿ- ಸವಾರ ಸಾವು

ಯಲಹಂಕ: ಯಲಹಂಕ ಸಂಚಾರಿ ‌ಪೊಲೀಸ್ ಠಾಣೆ ವ್ಯಾಪ್ತಿ‌ ಅಲ್ಲಾಳಸಂದ್ರ ಮೇಲ್ಸೇತುವೆಯ ಇಳಿಜಾರು ಬಳಿ ಬೈಕ್ ರಸ್ತೆ ವಿಭಜಕ ಮತ್ತು ಅಲಂಕಾರಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ‌ ಹೊಡೆದಿದೆ. ಪರಿಣಾಮ 31 ವರ್ಷದ ಶ್ರೀಕಾಂತ್ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾನೆ.

ನಿನ್ನೆ (ಮಂಗಳವಾರ) ರಾತ್ರಿ 10:30ರಿಂದ 11ಗಂಟೆ ನಡುವೆ ಅಪಘಾತ ಸಂಭವಿಸಿ ಹೋಂಡಾ ಡಿಯೋ ಬೈಕ್ ಜಖಂ ಆಗಿದೆ. ಯಲಹಂಕ ಉಪನಗರ ವಾಸಿ ಶ್ರೀಕಾಂತ್ ಮಾರುತಿ ಕಾರ್ಗಳ ಸೇಲ್ಸ್‌ನ ಕಲ್ಯಾಣಿ ಮೋಟಾರ್ಸ್‌ನಲ್ಲಿ ಉದ್ಯೋಗಿಯಾಗಿದ್ದ. ಈ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

15/06/2022 06:00 pm

Cinque Terre

1.68 K

Cinque Terre

0

ಸಂಬಂಧಿತ ಸುದ್ದಿ