ಯಲಹಂಕ: ಆತನೂ ಡಾಕ್ಟರ್.. ಆಕೆಯೂ ಡಾಕ್ಟರ್.. ಕೈತುಂಬ ಕೆಲಸ. ವಾಸಕ್ಕೆ ಬೆಂಗಳೂರು ಏರ್ಪೋರ್ಟ್ ರಸ್ತೆಯಲ್ಲಿ ಪ್ರತಿಷ್ಠಿತ ಅಪಾರ್ಟ್ಮೆಂಟ್. ಮದುವೆಯಾಗಿ ಕೇವಲ ಮೂರು ತಿಂಗಳು ಮಾತ್ರ ಆಗಿತ್ತು. ಆದರೆ ಆತನಿಗೆ ಕಳೆದ ಹತ್ತು ದಿನಗಳಿಂದ ಕಾಣಿಸಿಕೊಂಡ ಹೃದಯ ಸಂಬಂಧಿತ ನೋವು, ಆತನ ಆತ್ಮಹತ್ಯೆಗೆ ಪ್ರೇರಣೆಯಾಯ್ತಾ.?
ಆಂಧ್ರ ಪ್ರದೇಶ ಕಡಪ ಮೂಲದವರಾದ ಪೃಥ್ವಿಕಾಂತರೆಡ್ಡಿ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನ್ಯೂರೊ ಸರ್ಜನ್ ಆಗಿದ್ದರು. ಬೆಂಗಳೂರು ಮೂಲದ ಇವರ ಹೆಂಡತಿಯೂ ಸಹ ಡಾಕ್ಟರ್ ವೃತ್ತಿ ಮಾಡಿಕೊಂಡಿದ್ದಾರೆ. ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಿಷ್ಠಿತ ಅಪಾರ್ಟ್ಮೆಂಟ್ ನಲ್ಲಿ ಇಬ್ಬರು ವಾಸವಿದ್ರು.
ತೀವ್ರ ಹೃದಯ ನೋವಿನಿಂದ ಪೃಥ್ವಿಕಾಂತರೆಡ್ಡಿ ಅಪಾರ್ಟ್ಮೆಂಟ್ ನ 11ನೇ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಎಲ್ಲಾ ವಿಷಯಗಳ ಕುರಿತು ನಮ್ಮ ಪ್ರತಿನಿಧಿ ಸುರೇಶ್ ಬಾಬು ಅಪಾರ್ಟ್ಮೆಂಟ್ ನ ದುರಂತ ಸ್ಥಳದಿಂದ ನಡೆಸಿರುವ Walkthrough ನಿಮಗಾಗಿ..
PublicNext
15/06/2022 05:34 pm