ದೊಡ್ಡಬಳ್ಳಾಪುರ: ಏರ್ ಲೈನ್ಸ್ ಕಂಪನಿಯಲ್ಲಿ ವರ್ಕ್ ಫ್ರಂ ಹೋಮ್ ಕೆಲಸ ಕೊಡುವುದ್ದಾಗಿ ಹೇಳಿ ನೋಂದಣಿ ಮತ್ತು ದಾಖಲೆಗಳ ಪರಿಶೀಲನೆಗಾಗಿ ಹಣ ತಗೊಂಡು MBA ವಿದ್ಯಾರ್ಥಿನಿಗೆ ಆನ್ ಲೈನ್‌ನಲ್ಲಿ ವಂಚನೆ ಮಾಡಲಾಗಿದೆ. ಹಣ ಕಳೆದುಕೊಂಡ ಯುವತಿ ಪೊಲೀಸ್ ಠಾಣೆಗೆ ಈಗ ದೂರು ನೀಡಿದ್ದಾರೆ.
ನಗರದ ಮಾರುತಿನಗರದ ನಿವಾಸಿ ಹೇಮಲತಾ ವರ್ಷದ ಹಿಂದೆಯಷ್ಟೇ MBA ಪದವಿ ಪೂರ್ಣಗೊಳಿಸಿದರು. ಕೆಲಸ ಹುಡುಕುತ್ತಿದ್ದ ಅವರು ಆನ್ ಲೈನ್ ನಲ್ಲಿ ತಮ್ಮ ವಿದ್ಯಾಭ್ಯಾಸದ ದಾಖಲೆಗಳನ್ನ ಅಪ್ಲೋಡ್ ಮಾಡಿ ಕೆಲಸದ ನಿರೀಕ್ಷೆಯಲ್ಲಿದ್ದರು. ಇದೇ ಸಮಯದಲ್ಲಿ ಆಲ್ ಇಂಡಿಯಾ ರಿಕ್ಯೂರ್ಮೆಂಟ್ ಫಾರ್ಮ್ ಕಂಪನಿಯ ಹೆಸರು ಹೇಳಿ ಹೇಮಲತಾರವರಿಗೆ ಪೋನ್ ಮಾಡಿದ್ದಾರೆ.
ಇಂಡಿಗೋ ಏರ್ ಲೈನ್ಸ್ ನಲ್ಲಿ ವರ್ಕ್ ಫ್ರಂ ಹೋಮ್ ಕೆಲಸ ಕೊಡಿಸುವುದ್ದಾಗಿ ಹೇಳಿ ಪ್ರವೇಶ ಶುಲ್ಕವಾಗಿ 2 ಸಾವಿರ ಹಣ ಹಾಕುವಂತೆ ಹೇಳಿದ್ದಾರೆ. ಹೇಮಲತಾ 2 ಸಾವಿರ ರೂಪಾಯಿ ಹಣವನ್ನ ಗೂಗಲ್ ಪೇ ಮಾಡಿದ್ದಾರೆ. ಅನಂತರ ದಾಖಲೆಗಳ ಪರಿಶೀಲನೆಗಾಗಿ 1,500 ರೂಪಾಯಿ ಹಣ ಹಾಕುವಂತೆ ಹೇಳಿದ್ದಾರೆ. ಅನುಮಾನಗೊಂಡ ಹೇಮಲತಾ ನನಗೆ ಯಾವುದೇ ಉದ್ಯೋಗ ಬೇಡ ಹಣ ವಾಪಸ್ ಮಾಡುವಂತೆ ಹೇಳಿದ್ದಾರೆ. ನೋಂದಣಿ ಕ್ಯಾನ್ಸಲ್ ಮಾಡಲು 2,899 ರೂಪಾಯಿ ಹಣ ಕೇಳಿದ್ದಾರೆ. ಆದರೆ, ಹೇಮಲತಾ ಆಗ ನಾನು ಯಾವುದೇ ಹಣ ಕೊಡುವುದಿಲ್ಲವೆಂದು ಹೇಳಿ ಬಿಟ್ಟಿದ್ದಾರೆ.
ಮತ್ತೆ ಪೋನ್ ಮಾಡಿದ ಜಾಬ್ ಕಂಪನಿ ನಿಮ್ಮ ಎಲ್ಲಾ ದಾಖಲೆಗಳು ನಮ್ಮ ಬಳಿ ಇದೆ. ಹಣ ಕೊಡದಿದ್ದರೇ, ಎಲ್ಲೂ ಕೆಲಸ ಸಿಗದಂತೆ ಮಾಡುವುದ್ದಾಗಿ ಬೆದರಿಕೆ ಹಾಕಿದ್ದಾರೆ. ಹಣ ಕಳೆದುಕೊಂಡ ಹೇಮಲತಾ ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಸೈಬರ್ ಪ್ರಕರಣ ದಾಖಲು ಮಾಡಿದ್ದಾರೆ.
PublicNext
15/06/2022 11:47 am